Sunday, September 15, 2024

Latest Posts

ಸಿಎಂ ಯಡಿಯೂರಪ್ಪಗೆ ಮಂಡ್ಯ ರೈತರ ಪ್ರತಿಭಟನೆ ಎಚ್ಚರಿಕೆ..!

- Advertisement -

ಕರ್ನಾಟಕ ಟಿವಿ : ನಾಳೆ ಸಿಎಂ ಬಿಎಸ್ ಯಡಿಯೂರಪ್ಪ ಮಂಡ್ಯ ಜಿಲ್ಲೆಗೆ ಆಗಮಿಸಲಿದ್ದಾರೆ. ಕೆ.ಆರ್.ಎಸ್ ಭರ್ತಿಯಾಗಿರುವ ಹಿನ್ನೆಲ ಬಾಗಿಮ ಅರ್ಪಿಸಲು ಸಿಎಂ ಬರಲಿದ್ದು ಕಬ್ಬು ಬೆಳೆಗಾರರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

ಮದ್ದೂರು ತಾಲ್ಲೂಕು ಒಂದರಲ್ಲೇ ಸುಮಾರು 12 ಸಾವಿರ ಎಕರೆ ಯಲ್ಲಿ ಬೆಳೆದಿರುವ ಸುಮಾರು 7 ಲಕ್ಷ ಟನ್ ಸೇರಿ ಜಿಲ್ಲಾದ್ಯಂತ ಕಟಾವಿಗೆ ಸಿದ್ದವಾಗಿರುವ ಸುಮಾರು 40ಲಕ್ಷ ಟನ್ ಕಬ್ಬು ನುರಿಸಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಂಡು ಕಬ್ಬು ಬೆಳೆಗಾರರನ್ನು ಆತ್ಮಹತ್ಯೆ ಯಿಂದ ರಕ್ಷಿಸಬೇಕೆಂದು ಆಗ್ರಹಿಸಿ ಮದ್ದೂರು ಟೌನ್‌ ನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಮದ್ದೂರು ತಾಲ್ಲೂಕು ಕಬ್ಬು ಬೆಳೆಗಾರರ ಹೋರಾಟ ಸಮಿತಿ ಪತ್ರಿಕಾಗೋಷ್ಠಿ ನಡೆಸಿತು. ನಾಳೆ ಕೆ ಆರ್ ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಲು ಬರುತ್ತಿರುವ ಮಾನ್ಯ ಮುಖ್ಯಮಂತ್ರಿಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸದೇ ಇದ್ದರೆ ಬೃಹತ್ ಪ್ರತಿಭಟನೆ ಸಂಘಟಿಸವುದು ಅನಿವಾರ್ಯ ಎಂದು ಕಬ್ಬು ಬೆಳೆಗಾರರು ಸರ್ಕಾರಕ್ಕೆ ಎಚ್ಚರಿಸಿವೆ.

- Advertisement -

Latest Posts

Don't Miss