- Advertisement -
ಕರ್ನಾಟಕ ಟಿವಿ ಮಂಡ್ಯ : ಕೊರೊನಾ ವೈರಸ್ ಹಿನ್ನೆಲೆ ಇಡೀ ದೇಶವೇ ಲಾಕ್ ಡೌನ್ ಆಗಿದೆ. ವೈದ್ಯರು, ಪೊಲೀಸರು, ಅಧಿಕಾರಿಗಳು ಇದೆಲ್ಲದರ ನಡುವೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. ಈ ನಡುವೆ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆ ಹಗಲು ರಾತ್ರಿ ದುಡಿಯುತ್ತಿರುವವರಲ್ಲಿ ಪತ್ರಕರ್ತರು ಇದ್ದಾರೆ. ಈ ಹಿನ್ನೆಲೆ ಇಂದು ಅನನ್ಯ ಫೌಂಡೇಷನ್ ವತಿಯಿಂದ ಪತ್ರಕರ್ತರಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು.. ಮಂಡ್ಯ ಪತ್ರಕರ್ತರ ಭವನನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾದಿಕಾರಿ ಡಾ ವೆಂಕಟೇಶ್ ಪತ್ರಕರ್ತರಿಗೆ ಆಹಾರ ಕಿಟ್ ಗಳನ್ನ ವಿತರಣೆ ಮಾಡಿದ್ರು, ಈ ವೇಳೆ ಸಿಇಓ ಯಾಲಕ್ಕಿಗೌಡ, ಪತ್ರಕರ್ತರ ಸಂಘದ ಅದ್ಯಕ್ಷ ಮಂಜುನಾಥ್, ಹಾಗೂ ಅನನ್ಯ ಫೌಂಡೇಷನ್ ನ ಪದಾಧಿಕಾರಿಗಳು ಡಾ.ಅವಿನಾಶ್ , ಡಾ.ವಿನಯ್ , ಮೋಹನ್ , ರೇಖಾ , ಚಾರು , ರಶ್ಮಿ ಶಿವಕುಮಾರ್ , ಅನುಪಮಾ , ಸಂತೋಷ್ ಭಾಗಿಯಾದ್ರು.
ಪ್ರವೀಣ್ ಕುಮಾರ್ ಜಿಟಿ, ಕರ್ನಾಟಕ ಟಿವಿ, ಮಂಡ್ಯ
- Advertisement -