- Advertisement -
ಮಂಡ್ಯ : ಲಾಕ್ ಡೌನ್ ಹಿನ್ನೆಲೆ ರಾಜ್ಯ ಸರ್ಕಾರ ಉಚಿತ ಹಾಲು ವಿತರಣೆ ಮಾಡ್ತಿದೆ. ಆಸ್ಪತ್ರೆ ಸಿಬ್ಬಂದಿ ಚಕಿತ್ಸೆ ನೀಡುವ ಕೆಲಸ ಮಾಡ್ತಿದ್ರೆ, ಪೊಲೀಸರು ಲಾಕ್ ಡೌನ್ ಪಾಲನೆ ಮಾಡಿಸುವ ಕೆಲಸ ಮಾಡ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕೊರೊನಾ ಸೋಂಕು ನಿವಾರಕ ಸಿಂಪಡಣೆ ಮಾಡುವಲ್ಲಿ ನಿರತರಾಗಿದ್ದಾರೆ. ಈ ಹಿನ್ನೆಲೆ ಇವರಿಗೆ ಸರ್ಕಾರದಿಂದ ಸಿಗುವ ಉಚಿತ ಹಾಲನ್ನ ತಲುಪಿಸುವ ಕೆಲಸಕ್ಕೆ ಕೆಎಂಎಫ್ ನಿರ್ದೇಶಕಿ ರೂಪಾ ಮುಂದಾಗಿದ್ದಾರೆ. ಮದ್ದೂರಿನ ಅಗ್ನಿಶಾಮಕ ಸಿಬ್ಬಂದಿ ಕಚೇರಿಗೆ ತೆರಳಿ ರೂಪಾ ಉಚಿತ ಹಾಲನ್ನ ವಿತರಿಸಿದ್ರು. ಜೊತೆಗೆ ಕೊರೊನಾ ವಿರುದ್ಧದ ಹೋರಾಟಕ್ಕೆ ಧನ್ಯವಾಧ ಸಲ್ಲಿಸಿದ್ರು.
ಪ್ರವೀಣ್ ಕುಮಾರ್, ಕರ್ನಾಟಕ ಟಿವಿ ಮದ್ದೂರು
- Advertisement -