Sunday, April 20, 2025

Latest Posts

ಮಂಡ್ಯದ ಗೆಜ್ಜಲಗೆರೆಯಲ್ಲಿ ಅಮಿತ್ ಶಾ

- Advertisement -

ಮಂಡ್ಯ: ಹುಲಿಗೆರೆಪುರ ಹೆಲಿಪ್ಯಾಡ್ ಗೆ ಗೃಹ ಸಚಿವ ಅಮಿತ್ ಶಾ ಅವರು ಆಗಮಿಸಿದರು. ಇನ್ನು ಶಾ ಅವರ ಜೊತೆ ಸಿಎಂ ಬಸವರಾಜ್ ಬೊಮ್ಮಾಯಿ, ಪ್ರಹ್ಲಾದ ಜೋಶಿ ಹುಲಿಗೆರೆಪುರದಿಂದ ಗೆಜ್ಜೆಲೆರೆಗೆ ತೆರಳುತ್ತಿದ್ದಾರೆ. ಗೆಜ್ಜೆಲೆರೆಯಲ್ಲಿ ಮೆಗಾ ಹಾಲಿನ ಡೈರಿ ಉದ್ಘಾಟಿಸಲಿದ್ದಾರೆ. 5 ಎಕರೆ ವಿಸ್ತೀರ್ಣದಲ್ಲಿ ಹಾಲು ಉತ್ಪಾದಕ ಘಟಕ ನಿರ್ಮಾಣವಾಗಿದ್ದು, 260 ಕೋಟಿ ರೂಪಾಯಿ ವೆಚ್ಚದಲ್ಲಿ ಡೈರಿಯನ್ನು ನಿರ್ಮಾಣ ಮಾಡಲಾಗಿದೆ. ಇನ್ನು ಡೈರಿಯಲ್ಲಿ ಒಂದು ದಿನಕ್ಕೆ 30 ಮೆಟ್ರಿಕ್ ಟನ್ ಹಾಲಿನ ಪೌಡರ್ ಉತ್ಪಾದನೆ ಮಾಡಲಾಗುತ್ತದೆ.

ಮಂಡ್ಯಕ್ಕೆ ಇಂದು ಅಮಿತ್ ಶಾ ಆಗಮನ ಹಿನ್ನೆಲೆ : ರಸ್ತೆಗೆ ಡಾಂಬರೀಕರಣ ಹಾಗೂ ಸ್ವಚ್ಚತಾ ಕಾರ್ಯ

ಡೈರಿ ಉದ್ಘಾಟನೆ ನಂತರ ಇಂದು ನಡೆಯುವ ಜನಸಮಾವೇಶದಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ. ಮಂಡ್ಯದ ವಿವಿ ಮೈದಾನದಲ್ಲಿ ಬಿಜೆಪಿ ಸಮಾವೇಶ ಆಯೋಜನೆ ಮಾಡಲಾಗಿದ್ದು, ಅಮಿತ್ ಶಾ ಅವರು ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ ಹಾಗೂ ಅವರಿಗೆ ಜಡ್‍ಪ್ಲಸ್ ಭದ್ರತೆ ಇರುವ ಕಾರಣ ವಿಶ್ವವಿದ್ಯಾನಿಲಯಕ್ಕೆ ರಜೆ ಘೋಷಣೆ ಮಾಡಲಾಗಿದೆ.

ಅಂತ್ಯಕ್ರಿಯೆಗೆ ತಾಯಿಯ ಶವ ಹೊತ್ತು ಸಾಗಿದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ತಾಯಿ ಹೀರಾಬೆನ್ ವಿಧಿವಶ

 

- Advertisement -

Latest Posts

Don't Miss