Tuesday, October 28, 2025

Latest Posts

ಮಂಡ್ಯ ಹಾಸನ ಜಿಲ್ಲೆಗಳ ಗಡಿ ರಸ್ತೆಗಳು ಬಂದ್..

- Advertisement -

ಕರ್ನಾಟಕ ಟಿವಿ : ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ಮಂಡ್ಯ ಜಿಲ್ಲೆಯಿಂದ ಹಾಸನ ಜಿಲ್ಲೆಗೆ ಸಂಪರ್ಕಿಸುವ ಹೋಬಳಿಯ ಎಲ್ಲಾ ಮುಖ್ಯ ರಸ್ತೆಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ.   ಮಂಡ್ಯ ಜಿಲ್ಲೆಯ ನಾಗಮಂಗಲದಿಂದ ಸಂಪರ್ಕಿಸುವ ಬೆಟ್ಟದಹಳ್ಳಿ ಹಾಗೂ ಸಂತೆಬಾಚಹಳ್ಳಿ ರಸ್ತೆ, ಮೇಲುಕೋಟೆ ರಸ್ತೆ, ಕೆ.ಆರ್.ಪೇಟೆ ರಸ್ತೆ, ಕಿಕ್ಕೇರಿ ರಸ್ತೆ ಹಾಗೂ ಆನೆಗೊಳದಿಂದ ಕಾಂತರಾಜಪುರ, ಚಿಕ್ಕಬೀಳ್ತಿ, ಮಾದಪುರ, ದೊಡ್ಡತರಹಳ್ಳಿ, ಚಿಕ್ಕತರಹಳ್ಳಿ ಗಡಿ ಮಾರ್ಗವಾಗಿ ಬರುವ ಜಿಲ್ಲೆಗೆ ಸಂಪರ್ಕಿಸುವ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

ಎರಡು ಜಿಲ್ಲೆಗಳ ನಡುವಿನ ಗಡಿ ಬಂದ್ ಮಾಡುವ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಮೋಹನ್ ಕುಮಾರ್, ಕಾಂತರಾಜಪುರ ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ವಿ.ಪಿ.ಸುಧಾ, ಪಿಡಿಒ ಎ.ರಾಘವೇಂದ್ರ, ಪಿ.ಎ. ಸಿ.ಸಿ. ನಿರ್ದೇಶಕ ವಿ.ಆರ್.ರಾಜೇಶ್ ಮುಂತಾದವರಿದ್ದರು.

ಪ್ರವೀಣ್ ಕುಮಾರ್ ಜಿ.ಟಿ, ಕರ್ನಾಟಕ ಟಿವಿ, ಮಂಡ್ಯ

- Advertisement -

Latest Posts

Don't Miss