Sunday, April 13, 2025

Latest Posts

ಮಂಡ್ಯ: ರಾತ್ರಿ ಸುರಿದ ಧಾರಾಕಾರ ಮಳೆ ಕೊಚ್ಚಿ ಹೋದ ರಸ್ತೆ, ಒಡೆದ ವಿ.ಸಿ ನಾಲೆ

- Advertisement -

Mandya News:

ಮಂಡ್ಯದ ಮದ್ದೂರು ತಾಲೂಕಿನ ಮಾದ ನಾಯಕನಹಳ್ಳಿ ಬಳಿ ರಾತ್ರಿ ಗ್ರಾಮದಲ್ಲಿ ಧಾರಾಕಾರಾವಾಗಿ ಸುರಿದಿದ್ದ ಭಾರೀ ಮಳೆ ಪರಿಣಾಮವಾಗಿ ರಸ್ತೆಕೊಚ್ಚಿಹೋಗಿದೆ. ಮಳೆಯ ನೀರಿನಿಂದಾಗಿ ಹಳ್ಕಲ ಉಕ್ಕಿ ಹರಿದು‌ ರಸ್ತೆ ಕೊಚ್ಚಿ ಹೋಗಿದೆ.

ಮಂಡ್ಯದಲ್ಲಿ ಧಾರಾಕಾರ ಮಳೆಗೆ ಒಡೆದ ವಿ.ಸಿ ನಾಲೆ

ಮತ್ತೊಂದೆಡೆ ಮಂಡ್ಯ ತಾಲೂಕಿನ ದೊಡ್ಡಗರುಡನಹಳ್ಳಿ ಬಳಿ ವಿ.ಸಿ ನಾಲೆ ಒಡೆದು ಕಾಲುವೆ ನೀರು ರೈತರ ಜಮೀನಿಗೆ ನುಗ್ಗಿದೆ. ನಾಲೆ ನೀರು ಜಮೀನಿಗೆ ನುಗ್ಗಿ ಸುತ್ತಮುತ್ತಲ ಪ್ರದೇಶದ ರೈತರ ಬೆಳೆ ನಷ್ಟವಾಗಿದೆ.ಈ ಹಿಂದೆ ಇದೇ ಜಾಗದಲ್ಲಿ ನಾಲೆ ಏರಿ ಹೊಡೆದು ದುರಸ್ತಿ ಮಾಡಲಾಗಿತ್ತು.ಮತ್ತೆ ಅದೇ ಜಾಗದಲ್ಲಿ ನಾಲೆ ಒಡೆದಿದ್ದು,ಕಳಪೆ ಕಾಮಗಾರಿ ಕಾರಣ ಎಂದು ರೈತರು ಆಕ್ರೋಶ ಹೊರ ಹಾಕಿದ್ದಾರೆ.ನಾಲೆ ನೀರು ಜಮೀನಿಗೆ ನುಗ್ಗಿ ಬೆಳೆ ನಷ್ಟವಾಗಿದ್ದು ಪರಿಹಾರಕ್ಕೆ ರೈತರು  ಒತ್ತಾಯ ಮಾಡಿದ್ದಾರೆ.

ಜಮೀನಿನಲ್ಲಿ ಮಲಗಿದ್ದ ಮಹಿಳೆ ಮೇಲೆ ಹೆಡೆಬಿಚ್ಚಿ ನಿಂತ ನಾಗರಾಜ…!

ಮಂಡ್ಯದಲ್ಲಿ ಮಳೆತಂದ ಅವಾಂತರ, ನೊಂದ ಮಹಿಳೆಯ ಕಣ್ಣೀರು

ವಿದ್ಯಾರ್ಥಿನಿಯರಿಗೆ ಸ್ವಾಮೀಜಿಯಿಂದ ಲೈಂಗಿಕ ಕಿರುಕುಳ: ಪ್ರಕರಣ ದಾಖಲು

- Advertisement -

Latest Posts

Don't Miss