Mandya News update:
ಸಮಾಜಮುಖಿ ಕಾರ್ಯದ ಮೂಲಕ ಕ್ಷೇತ್ರದಲ್ಲಿ ಬಿ.ಆರ್.ರಾಮಚಂದ್ರ ಅಲರ್ಟ್ ಆಗಿದ್ದಾರೆ.ತೀವ್ರ ಪೈಪೋಟಿಯಿಂದ ಟಿಕೆಟ್ ಗಾಗಿ ಸಂಘಟನೆ. ನಡೆಸುತ್ತಿದ್ದಾರೆ..ಜೆಡಿಎಸ್ ಮುಖಂಡ ಹಾಗು ಅಧ್ಯಕ್ಷ, ಬಿ.ಆರ್.ರಾಮಚಂದ್ರ, ಮನ್ಮುಲ್ ಶಂಭೂಸೇವಾ ಟ್ರಸ್ಟ್ ಮೂಲಕ ಕ್ಷೇತ್ರದಲ್ಲಿ ಸಮಾಜಮುಖಿ ಕಾರ್ಯ ಆರಂಭಿಸಿದ್ದಾರೆ. ‘ಶಂಭೂ ಧರ್ಮ ಯಾತ್ರೆ’ ಮೂಲಕ ಜನರಿಗೆ ಧರ್ಮಸ್ಥಳಕ್ಕೆ ಉಚಿತ ಯಾತ್ರೆ ಕಲ್ಪಿಸಿದ್ದಾರೆ.ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಉಚಿತವಾಗಿ ಜನರನ್ನ ಕಳುಹಿಸುತ್ತಿರುವ ರಾಮಚಂದ್ರ.ತಾಯಿಯ ಆಸೆಯಂತೆ ಜನರನ್ನ ಟ್ರಸ್ಟ್ ಮೂಲಕ ಯಾತ್ರೆಗೆ ಕಳುಹಿಸಿ ಸಮಾಜಮುಖಿ ಕಾರ್ಯ ನಡೆಸುತ್ತಿದ್ದಾರೆ. ಜನರು ಮಂಡ್ಯ ಕ್ಷೇತ್ರದಲ್ಲಿ ಹಲವು ಗ್ರಾಮಗಳಿಂದ ಯಾತ್ರೆಗೆ ತೆರಳಿದ್ದಾರೆ.ದಿನಕ್ಕೆ ಮೂರು ಬಸ್ಸಿನಂತೆ ದಿನನಿತ್ಯ ಜನರಿಗೆ ಧರ್ಮಸ್ಥಳದ ಯಾತ್ರೆ ಯೋಗ ಲಭ್ಯವಾಗಿದೆ.
ಮಂಡ್ಯ ಕ್ಷೇತ್ರದಲ್ಲಿ ಸಂಚರಿಸಿ ಸಂಘಟಿಸುವ ಮೂಲಕ ವರ್ಚಸ್ಸನ್ನು ವೃದ್ದಿಸಿಕೊಳ್ತಿರೋ ಮನ್ಮುಲ್ ಅಧ್ಯಕ್ಷ ರಾಮಚಂದ್ರ.ಮಂಡ್ಯನಗರದ ಗಾಂಧಿ ನಗರದ ಜನರನ್ನ ಧರ್ಮ ಯಾತ್ರೆಗೆ ಕಳುಹಿಸಿಕೊಟ್ಟ ರಾಮಚಂದ್ರ.ಕಾಳಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಧರ್ಮಸ್ಥಳಕ್ಕೆ ಹೊರಟ ಜನರು.’ಮೊದಲು ಕುಮಾರಸ್ವಾಮಿ ಸಿಎಂ ಆಗಬೇಕು’ ಎಂದು ಹರಕೆ ಹೊತ್ತಿದ್ದು ವಿಶೇಷ.
ಮಂಡ್ಯ ಕ್ಷೇತ್ರದಿಂದ ಟಿಕೆಟ್ ಗೆ ಮನವಿ ಮಾಡಲಾಗಿದೆ:
ಈ ಭಾರಿ ಟಿಕೆಟ್ ಕೊಡ್ತಾರೆ ಅನ್ನೊ ಭರವಸೆ ಇದೆ.ವರಿಷ್ಠರು ಏನು ತೀರ್ಮಾನ ಕೈಗೊಳ್ತಾರೋ ಅದಕ್ಕೆ ಬದ್ದ.ಪಕ್ಷ ಸಂಘಟನೆ ಮೂಲಕ ನಮ್ಮ ಜೆಡಿಎಸ್ ಬಲವರ್ಧನೆ ಮಾಡಬೇಕು.ಈ ಯಾತ್ರೆಯ ಹಿಂದೆ ಯಾವುದೇ ಉದ್ದೇಶ ಇಲ್ಲ..ನಮ್ಮ ತಾಯಿಯ ಕನಸಂತೆ ಜನರಿಗೆ ಧರ್ಮಯಾತ್ರ ಮಾಡಿಸ್ತಿದ್ದೇನೆ ಅಷ್ಟೆ..ಜೆಡಿಎಸ್ ನಲ್ಲಿ ಯಾರಿಗೆ ಟಿಕೆಟ್ ಸಿಕ್ಕರು ನಾವು ಪಕ್ಷ ಸಂಘಟಿಸುತ್ತೇವೆ.ಯಾವುದೇ ಭಿನ್ನಾಭಿಪ್ರಾಯ ಎದುರಾಗಲ್ಲ ಎಂದು ಜೆಡಿಎಸ್ ಮುಖಂಡ ರಾಮಚಂದ್ರ ಹೇಳಿದ್ದಾರೆ.