ಕೆಂಪೇಗೌಡರ ಜಯಂತೋತ್ಸವ ಬಗ್ಗೆ ಪತ್ರಿಕಾಗೋಷ್ಠಿ!
ದಿನಾಂಕ 27/06/2022 ಸೋಮವಾರ ಸರ್ಕಾರಿ ಕಾರ್ಯಕ್ರಮವನ್ನಾಗಿ ಕೆಂಪೇಗೌಡ ಜಯಂತಿಯನ್ನು ಮಂಡ್ಯ ಜಿಲ್ಲೆಯ ಎಲ್ಲಾ ಸಮುದಾಯದ ಸಂಘಟನೆಗಳು ಜಿಲ್ಲಾಡಳಿತದೊಂದಿಗೆ ಕೆಂಪೇಗೌಡರ ಜಯಂತಿಯನ್ನು ಆಚರಿಸಲು ತೀರ್ಮಾನಿಸಿರುತ್ತಾರೆ ಆದ್ದರಿಂದ ಜಿಲ್ಲೆಯ ಎಲ್ಲ ಸಮುದಾಯದ ಮುಖಂಡರು ಹಾಗೂ ಆಟೋ ಮಾಲೀಕರ ಸಂಘ, ಲಾರಿ ಮಾಲೀಕರ ಸಂಘ ಬಸ್ ಮಾಲೀಕರ ಸಂಘ, ಹೋಟೆಲ್ ಮಾಲೀಕರು ಹಾಗೂ ಮತ್ತಿತರು ಸೋಮವಾರ 10:30 ಗಂಟೆಗೆ ಜಿಲ್ಲಾ ಕಚೇರಿಯಿಂದ ಕಲಾಮಂದಿರದ ತನಕ ಕೆಂಪೇಗೌಡ ಭಾವ ಚಿತ್ರದೊಂದಿಗೆ ಹತ್ತಾರು ಕಲಾ ತಂಡದೊಂದಿಗೆ ಮೆರವಣಿಗೆ ಹೊರಟು ಕಾರ್ಯಕ್ರಮ ನಡೆಯುವ ಸ್ಥಳ ಮಂಡ್ಯ ಕಲಾಮಂದಿರ ಅಲ್ಲಿಗೆ ತಲುಪಿ ವೇದಿಕೆ ಕಾರ್ಯಕ್ರಮ ಪ್ರಾರಂಭವಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಶ್ರೀರಂಗಪಟ್ಟಣ
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಬೇವಿನಹಳ್ಳಿ ಗ್ರಾಮದಲ್ಲಿ ಪಿ.ಎ.ಸಿ.ಎಸ್, ಎಂ.ಎಸ್.ಸಿ ಯೋಜನೆಯಲ್ಲಿ ನೂತನವಾಗಿ ನಿರ್ಮಿಸಿರುವ ವಿವಿದೋದ್ದೇಶ ಮಾರಾಟ ಮಳಿಗೆಗಳ ಉದ್ಘಾಟನಾ ಸಮಾರಂಭ ನಡೆಯಿತು. ಮಳಿಗೆಗಳನ್ನು ಕ್ಷೇತ್ರದ ಶಾಸಕ ರವೀಂದ್ರ ಶ್ರೀ ಕಂಠಯ್ಯ ಟೇಪ್ ಕತ್ತರಿಸುವ ಮೂಲಕ ಉದ್ಘಾಟನೆ ಮಾಡಿದರು. ಈ ವೇಳೆ ಸಂಘದ ನಿರ್ದೇಶಕರು ಸೇರಿದಂತೆ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.
ಪಿಎಸ್‌ಐ ಕೆಲಸ ಕೊಡಿಸುವುದಾಗಿ ನಂಬಿಸಿ ರೈತನಿಗೆ 30 ಲಕ್ಷ ಪಂಗನಾಮ.!
ಪಿಎಸ್‌ಐ ನೇಮಕಾತಿ ಅಕ್ರಮ ಆರೋಪ ಬೆನ್ನಲ್ಲೇ ಇದೀಗ ಮಂಡ್ಯ ಜಿಲ್ಲೆಯ ರೈತನೊಬ್ಬ 30 ಲಕ್ಷ ರೂಪಾಯಿ ಹಣ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ನಿಂಗರಾಜು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಾಮನಹಳ್ಳಿ ರೈತನಾಗಿದ್ದನು.ಮಂಜುನಾಥ ಎಂಬಾತ 40 ಲಕ್ಷ ಕೊಟ್ರೆ ಪಿಎಸ್‌ಐ ಕೆಲಸ ಕೊಡಿಸುವುದಾಗಿ ರೈತ ನಿಂಗರಾಜು ಜತೆ ಮಾತುಕತೆ ನಡೆಸುತ್ತಾನೆ. ಮಾತು ಕತೆ ಬಳಿಕ 38 ಲಕ್ಷ ಕೊಡುವುದಾಗಿ ರೈತ ನಿಂಗರಾಜು ಒಪ್ಪಿದ್ದಾನೆ. ಆದ ಬಳಿ ತನ್ನ ಬಳಿಯಿದ್ದ ಒಂದೂವರೆ ಎಕರೆ ಜಮೀನು ಮಾರಾಟ ಮಾಡಿ 17ಲಕ್ಷ ವನ್ನು ಬ್ಯಾಂಕ್ ಮೂಲಕ ಆರ್‌ಟಿಜಿಎಸ್ ಹಾಗೂ 13.25 ಲಕ್ಷ ಕ್ಯಾಶ್ ನೀಡಿದ್ದಾನೆ. ಆದರೆ ಮಗನ ಹೆಸರು ಪಿಎಸ್‌ಐ ಲಿಸ್ಟ್ ನಲ್ಲಿ ಬರದಿದ್ದಾಗ ಹಣ ಕೇಳಿದ ರೈತ ನಿಂಗರಾಜುಗೆ ಇಲ್ಲಸಲ್ಲದ ಮಾತುಗಳಲ್ಲಿ ನಿಂದಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೆ ಆರ್ ಪೇಟೆ
ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಸಾವು..!
ಮಂಡ್ಯ: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಾರಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಹನಾ (35) ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಪತ್ನಿ ಆತ್ಮಹತ್ಯೆ ಬಳಿಕ ಪತಿ ಮಧು ಹಾಗೂ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ. ಸಹನಾ ಆತ್ಮಹತ್ಯೆಯಿಂದ ಆಕ್ರೋಶಗೊಂಡ ಪೋಷಕರು, ಮನೆಯ ಮುಂದೆ ಇದ್ದ ಆರೋಪಿ ಮಧು ಕಾರು ಜಖಂಗೊಳಿಸಿದ್ದಾರೆ. ಜೊತೆಗೆ ಈ ಸಂಬಂಧ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.