ಕರ್ನಾಟಕ ಟಿವಿ ಮಂಡ್ಯ : ಮೈಷುಗರ್ ಸಕ್ಕರೆ ಕಾರ್ಖಾನೆ ಪುನರ್ ಆರಂಭಿಸಲು ಯಾವುದೇ ಕಾರಣಕ್ಕೂ ತಡ ಮಾಡದಂತೆ ಸಂಸದೆ ಸುಮಲತಾ ಅಂಬರೀಶ್ ಸರ್ಕಾರದ ಮೇಲೆ ಒತ್ತಡ ಹಾಕ್ತಿದ್ದಾರೆ.. ತಡವಾದರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ.. ಹೀಗಾಗಿ ಆದಷ್ಟು ಬೇಗ ಾರಮಭಕ್ಕೆ ಅಗತ್ಯ ಹೆಜ್ಜೆ ಇಡುವಂತೆ ಸಕ್ಕರೆ ಸಚಿವ ಶಿವರಾಂ ಹೆಬ್ಬಾರ್ ರನ್ನ ಭೇಟಿಯಾದ ಸಂಸಸದೆ ಸುಮಲತಾ ಒತ್ತಾಯ ಮಾಡಿದ್ರು.. ಈ ವೇಳೆ ಸಂಸದೆ ಸುಮಲತಾ ಅವರ ಜೊತೆ ಮಾತನಾಡಿದ ಸಚಿವ ಶಿವರಾಮ್ ಹೆಬ್ಬಾರ್ ಇನ್ನೆರಡು ದಿನಗಳಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು ಕಾರ್ಯಾಚರಣೆ ಮತ್ತು ನಿರ್ವಹಣೆ (Operation and Maintenance ) ಮಾದರಿಯಲ್ಲೇ ಪುನಃ ಸ್ಥಾಪಿಸಲಾಗುವುದೆಂದು ಭರವಸೆ ನೀಡಿದ್ದಾರೆ.. ಸಮಸದೆ ಸುಮಲತಾ ಮಂಡ್ಯ ಸಕ್ಕರೆ ಕಾರ್ಖಾನೆ ಶತಾಯಗತಾಯ ರೈತರಿಗೆ ಅನುಕೂಲವಾಗುವ ಮಾದರಿಯಲ್ಲಿ ಪುನರ್ ಆರಂಭಕ್ಕೆ ಸತತ ಪ್ರಯತ್ನ ಮಾಡ್ತಿದ್ದಾರೆ.. ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಖಾಸಗೀಯವರಿಗೆ ನೀಡಲು ವಿರೋಧ ಮಾಡ್ತಿರುವ ಹಿನ್ನೆಲೆ ( ಓ & ಎಂ ) ಮಾದರಿಯಲ್ಲಿ ಕಾರ್ಖಾನೆ ಪುನರ್ ಆರಂಭಕ್ಕೆ ಒತ್ತಡ ಹಾಕ್ತಿದ್ದಾರೆ.
ಪ್ರವಿಣ್ ಕುಮಾರ್ ಜಿಟಿ, ಕರ್ನಾಟಕ ಟಿವಿ, ಮಂಡ್ಯ