ಮಂಡ್ಯ : ಸಂಸತ್ ಅಧಿಕಾವೇಶನ ಹಿನ್ನೆಲೆ ದೆಹಲಿಯಲ್ಲಿದ್ದ ಸಂಸದೆ ಸುಮಲತಾ ಬೆಂಗಳೂರಿಗೆ ಆಗಮಿಸಿದ್ದ ಸುಮಲತಾ ಹೋಂ ಕ್ವಾರಂಟೈನ್ ನಲ್ಲಿ ಇದ್ದರು. ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೇ ಸಿಂಧಿಯಾ ಪುತ್ರ ಬಾಲಿವುಡ್ ಗಾಯಕಿ, ಕೊರೊನಾ ಸೋಂಕಿತೆ ಕನ್ನಿಕಾ ಕಪೂರ್ ಆಯೋಜಿಸಿದ್ದ ಪಾರ್ಟಿಯಲ್ಲಿ ಭಾಗಿಯಾಗಿದ್ರು. ನಂತರ ಸಂಸತ್ ಅಧಿವೇಶನದಲ್ಲಿ ಭಾಗಿಯಾಗಿದ್ರು.. ಹೀಗಾಗಿ ದುಷ್ಯಂತ್ ಸಿಂಗ್ ಕುಳಿತುಕೊಳ್ಳುವ ಸುತ್ತಮುತ್ತಲಿನ ಸಂಸದರು ಹೋಂ ಕ್ವಾರಂಟೈನ್ ನಲ್ಲಿ ಇದ್ದರು.. ಸುಮಲತಾ ಸಹ ನನ್ನಿಂದ ಜನರಿಗೆ ಯಾರಿಗೂ ತೊಂದರೆಯಾಗಬಾರದು ಅಂತ ಬೆಂಗಳೂರು ನಿವಾಸದಲ್ಲಿ ಹೋಂ ಕ್ವಾರಂಟೈನ್ ಆಗಿದ್ರು. ಮಂಡ್ಯದಲ್ಲಿ ತನ್ನ ಬೆಂಬಲಿಗರು ಕೂಲಿಕಾರ್ಮಿಕರಿಗೆ ಊಟ ಹಾಗೂ ಅಗತ್ಯವಿರುವ ಜನರಿಗೆ ದಿನಸಿ ಒದಗಿಸುವ ಕೆಲಸ ಮಾಡ್ತಿದ್ರು. ಇಂದು ಮಂಡ್ಯಕ್ಕೆ ಬೆಳಗ್ಗೆ ಆಗಮಿಸಿದ ಸಂಸದೆ ಸುಮಲತಾಅಧಿಕಾರಿಗಳ ಜೊತೆ ಮಾತನಾಡಿದ್ರು. ನಂತರ ಸ್ವರ್ಣಸಂದ್ರ ಹಾಗೂ ಮಳವಳ್ಳಿಗೆ ಭೇಟಿ ನೀಡಿ ಕೋವಿಡ್ ಸೋಂಕಿತ ನಿರ್ಬಂಧಿತ ಪ್ರದೇಶಕ್ಕೆ ಭೇಟಿ ನೀಡಿ ನಂತರ ಮಂಡ್ಯದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ರು.
ಮಂಡ್ಯ ಜನರಿಗೆ ಸಮಲತಾ ಮನವಿ
ಕೊರೋನಾ ವೈರಸ್ ತಡೆಗಟ್ಟಲು ಮಂಡ್ಯ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಮಂಡ್ಯದಲ್ಲಿ ಯಾವುದೇ ಕೊರೋನಾ ಪಾಸಿಟಿವ್ ಇಲ್ಲಾದೆ ನೆಮ್ಮದಿ ಇತ್ತು. ಮೊದಲು ಒಂದು ಪಾಸಿಟಿವ್ ಪ್ರಕರಣ ಇರಲಿಲ್ಲ. ಈಗ ಆ ಪರಿಸ್ಥಿತಿ ಇಲ್ಲಾ. ಮಳವಳ್ಳಿಯಲ್ಲಿ 7ಪಾಸಿಟಿವ್,ಮಂಡ್ಯದ ಸ್ವರ್ಣಸಂದ್ರದಲ್ಲಿ 1 ಪಾಸಿಟಿವ್ ಪ್ರಕರಣ ಬಂದಿದೆ. ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಧಿಕಾರಿಗಳು ಕೈಗೊಂಡಿದ್ದಾರೆ. ಇದರಿಂದ ಮಂಡ್ಯ ಸೇಫ್ ಜೋನ್ ನಲ್ಲಿದೆ. ರೇಡ್ ಜೋನ್ ಗೆ ಬಂದಿಲ್ಲ ಆದ್ರು ಒಂದು ಹಂತದಲ್ಲಿ ಸೇಫ್ ಜೋನ್ . ಮುಂದೆಯೂ ನಾವು ಕಟ್ಟುನಿಟ್ಟಾಗಿ ಇರುವ ಪರಿಸ್ಥಿತಿ ಬರಬಹುದು ಎಲ್ಲಾರಿಗೂ ಕಷ್ಟವಾಗುತ್ತಿದೆ ,ತೊಂದರೆಯಾಗುತ್ತಿದೆ…

ಬೀದಿ ವ್ಯಾಪಾರಿಗಳಿಗೆ, ಕಾರ್ಮಿಕರಿಗೆ ಕಷ್ಟವಾಗುತ್ತಿದೆ. ಅವರಿಗೆ ಅಗತ್ಯ ವಸ್ತುಗಳ ತಲುಪಿಸುವ ಕೆಲಸ ನಡೀತಿದೆ. ಉಳಿದವರು ಮನೆಯಲ್ಲಿ ಇದ್ದು ಲಾಕ್ ಡೌನ್ ಆದೇಶ ಪಾಲಿಸೋಣಾ ಎಂದು ಸಾರ್ವಜನಿಕರಿಗೆ ಸಂಸದೆ ಸುಮಲತಾ ಅಂಬರೀಶ್ ಮನವಿ ಮಾಡಿದ್ದಾರೆ..
ಏನೇ ಆದ್ರೂ ರೈತರು ಮೊದಲು ಸಂಕಷ್ಟಕ್ಕೆ ಗುರಿಯಾಗ್ತಾರೆ..!
ಮಂಡ್ಯದಲ್ಲಿ ಯಾವುದೇ ತೊಂದರೆ ಆದ್ರು ಮೊದಲು ಸಂಕಷ್ಟಕ್ಕೆ ಗುರಿಯಾಗುವುದು ರೈತರು. ರೈತರಿಗೆ ಕೇಂದ್ರ, ರಾಜ್ಯ,ಹಾಗೂ ಜಿಲ್ಲಾಡಳಿತದಿಂದ ಸೌಲಭ್ಯಗಳು ಸಿಗುತ್ತಿದೆ ಅಂತ ಹೆಳಿದ್ರು.. ಪಿಎಂ ಫಂಡ್ ಯಾವ ರೀತಿ ಬಳಸ್ತಾರೆ ಅಂತ ಹೇಳಿಲ್ಲ.. ಮುಂದೆ ಯಾವ ರೀತಿ ಹಂಚಿಕೆ ಮಾಡಿ ನೀಡುತ್ತಾರೆ,ಯಾವ ರೀತಿ ಬಳಸುತ್ತಾರೆ ಎಂದು ನೋಡಬೇಕು ಅಂತ ಸುಮಲತಾ ಹೇಳಿದ್ರು. ಕೊರೋನಾ ವೈರಸ್ ನ ಪರಿಸ್ಥಿತಿಯನ್ನ ಯಾರು ಊಹಿಸಲಾಗಿರಲ್ಲಿಲ್ಲ. ಜಿಲ್ಲೆಗೆ ಏಣೇನು ಬೇಕು ಅದನ್ನ ಸರ್ಕಾ ಸರ್ಕಾರ ಒದಗಿಸುತ್ತದೆ , ಕೊರೋನಾ ತಡೆಗಟ್ಟಲು ಎಲ್ಲರೂ ಸಹಕರಿಸಿ ಎಂದು ಸಂಸದೆ ಸುಮಲತಾ ಅಂಬರೀಶ್ ರಿಂದ ಮನವಿ..
ಪ್ರವೀಣ್ ಕುಮಾರ್ ಜಿಟಿ, ಕರ್ನಾಟಕ ಟಿವಿ, ಮಂಡ್ಯ