www.karnatakatv.net ಮೈಷುಗರ್ ಕಾರ್ಖಾನೆಯ ಆಸ್ತಿ ಸರ್ಕಾರೀ ವ್ಯವಸ್ಥೆಯಲ್ಲೇ ಉಳಿಯುತ್ತಿರುವುದು ಸಂತಸದ ವಿಷಯ. ಈ ವರ್ಷವೇ ಕಬ್ಬು ಅರೆಯಬೇಕಾಗಿರುವುದು ಪ್ರಸ್ತುತ. ಸರ್ಕಾರ ಈ ವಿಷಯದಲ್ಲಿ ಉದಾಸೀನ ಮಾಡದೇ ಕಬ್ಬು ಅರೆಯಲು ಈ ವರ್ಷವೇ ಪ್ರಾರಂಭಿಸಬೇಕು. Operation and maintainance ವಿಧಾನದಲ್ಲಿ ತಾತ್ಕಾಲಿಕವಾಗಿ ಪ್ರಾರಂಭಿಸಲು ನಮ್ಮ ವಿರೋಧವಿಲ್ಲ. ಈ ಬಗೆಗೆ, ನಾವು ಹಳ್ಳಿಗಳಿಗೆ ಸುತ್ತಿದಾಗಲೂ ಹೇಳಿದ್ದೇವೆ.. ರೈತರ ಹಿತ ಕಾಯುವುದರ ಬದಲು, ಪ್ರತಿಷ್ಠೆಗೆ ಜೋತುಬೀಳುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ಡಾ ರವೀಂದ್ರ ಹೇಳಿದ್ದಾರೆ.
ಅಂದ ಹಾಗೆ, ಮೈಷುಗರ್ ಕಾರ್ಖಾನೆಯನ್ನ Operation and maintainance ವಿಧಾನದಲ್ಲೂ ಅರೆಯಲು ಬಿಡುವುದಿಲ್ಲ ಎನ್ನುವ ಮೇಲುಕೋಟೆ ಶಾಸಕರು, ತಾವೇ ಮಂತ್ರಿ ಆಗಿದ್ದಾಗ, ಪಿ ಎಸ್ ಎಸ್ ಕೆ ಕಾರ್ಖಾನೆಯನ್ನ 40 ವರ್ಷ ಗುತ್ತಿಗೆ ನೀಡಲು ತೀರ್ಮಾನ ಕೈಗೊಳ್ಳುವ ಹಾಗೆ, ಜನರಲ್ ಬಾಡಿ ಮೀಟಿಂಗ್ ನಲ್ಲಿ ತೀರ್ಮಾನಿಸಿದ್ದೇಕೆ? ಎಂದು ಶಾಸಕ ಪುಟ್ಟರಾಜು ವಿರುದ್ಧ ರವಿಂದ್ರ ವಾಗ್ದಾಅಳೀ ನಡೆಸಿದ್ದಾರೆ.
150 ರಿಂದ 200 ಕೋಟಿಯೊಳಗೆ ಒಂದು ಮಾದರಿ ಹೊಸ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಅವಕಾಶ ಇರುವಾಗ, ನಿರಾಣಿ 405 ಕೋಟಿಗೆ ಗುತ್ತಿಗೆ ತೆಗೆದುಕೊಳ್ಳುತ್ತಾರೆಂದರೆ, ಸಕ್ಕರೆ ಕಾರ್ಖಾನೆಯ ಜೊತೆಗೆ ಎಲ್ಲವನ್ನೂ ಮಾರಿಬಿಟ್ಟರಾ? ಪುಟ್ಟರಾಜು ಉತ್ತರಿಸಬೇಕಿದೆ… ರೈತನ ವಿಷಯದಲ್ಲೂ ರಾಜಕೀಯ ಮಾಡುವ ಇಂತಹ ಜನರ ಬಗೆಗೆ, ನನ್ನ ಜನ ಎಚ್ಚರಿಕೆಯಿಂದ ಇರಬೇಕಿದೆ..
ಅಂದ ಹಾಗೆ, ಬರುವ ಸೋಮವಾರ, ಮಂಡ್ಯದಲ್ಲಿ ಪತ್ರಿಕಾ ಗೋಷ್ಠಿ 11, 30 ಕ್ಕೆ ಹಾಗೂ, ನನ್ನ ರೈತರಿಂದ ಸಾಂಕೇತಿಕವಾಗಿ ಸಂಗ್ರಹಿಸಿದ್ದ ಒಂದು ರೂಪಾಯಿ ನಾಣ್ಯಗಳನ್ನ ಜಿಲ್ಲಾಧಿಕಾರಿಗಳಿಗೆ ನೀಡಿ, ಈ ವರ್ಷವೇ ಮೈಷುಗರ್ ಕಾರ್ಖಾನೆಯನ್ನ ಪ್ರಾರಂಭಿಸಲು ಒತ್ತಾಯಿಸುವುದು… ಖಾಸಗೀಕರಣ ಮತ್ತು ಓ ಅಂಡ್ ಎಂ ಮಾದರಿಯಲ್ಲಿ ಕಾರ್ಖಾನೆಗಳು ಹೇಗೆ ನಡೆಯುತ್ತವೆ ಎನ್ನುವುದನ್ನ ನನ್ನ ರೈತರೂ ಗಮನಿಸಲಿ.. ಇನ್ನು ಮೂರು ವರ್ಷಕ್ಕಾದರೂ, ನನ್ನವರಿಗೆ ಅರ್ಥ ಆಗಲಿ ಎಂದು ಡಾ ಹೆಚ್ ಎನ್ ರವೀಂದ್ರ ಹೇಳಿದ್ದಾರೆ..
ಹೀಗಾಗಲೇ ಪಾಂಡವಪುರದ ಪಿಎಸ್ ಎಸ್ ಕೆ ಕಾರ್ಖಾನೆಯನ್ನ ಮುರುಗೇಶ್ ನಿರಾಣಿಯವರ ನಿರಾಣಿ ಷುಗರ್ಸ್ 40 ವರ್ಷಕ್ಕೆ ಗುತ್ತಿಗೆ ತೆಗೆದುಕೊಂಡಿದೆ. ಒಂದು ವೇಳೆ ನಿರಾಣಿ ನಿರಾಯಾಸವಾಗಿ ಪಾಂಡವಪುರ ಫ್ಯಾಕ್ಟರಿ ನಡೆಸಿ ರೈತರಿಗೆ ಸರಿಯಾದ ವೇಳೆಗೆ ಸರಿಯಾದ ದರ ನೀಡಿದ್ರೆ ಮೈಷುಗರ್ ವ್ಯಾಪ್ತಿಯ ರೈತರು ನಮ್ಮ ಫ್ಯಾಕ್ಟರಿಯನ್ನ ಖಾಸಗಿಯವರಿಗೆ ಕೊಡಿ ಎಂದು ಒತ್ತಾಯಿಸಬಹುದು. ಆದ್ರೆ ಮಂಡ್ಯ ಜಿಲ್ಲೆಯ ಬಹುತೇಕ ರಾಜಕಾರಣಿಗಳು ರೈತರ ಕಬ್ಬು ಫ್ಯಾಕ್ಟರಿಗೆ ಹೋಗುವುದಕ್ಕಿಂತ ಮುಂದಿನ ದಿನಗಳಲ್ಲಿ ಅದರ ಯಶಸ್ಸು ಸಂಸದೆ ಸುಮಲತಾಗೆ ಸಿಕ್ಕಿಬಿಟ್ರೆ ಅನ್ನುವ ಗೊಂದಲದಲ್ಲೇ ವಿರೊಧ ಮಾಡ್ತಿದ್ದಾರೆ.. ಈ ಹೋರಾಟದಲ್ಲಿ ಭಾಗಿಯಾಗ್ತಿರುವ ಕೆಲ ರೈತ ಹೋರಾಟಗಾರರ ಕಬ್ಬು ಸಾಗಾಣೆಯ ಪರ್ಮೀಟ್ ಮೈಷುಗರ್ ಗೆ ಇಲ್ಲ ಅಂತಹವರು ಮೈಷುಗರ್ ಗೆ ವಿರೋಧ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡ್ತಿದ್ದಾರೆ ಅಂತ ಮಾಜಿ ಶಾಸಕ ಮಂಡ್ಯದ ಜಿಲ್ಲೆಯ ಹಿರಿಯ ಮುಖಂಡ ಡಾ ಚೌಡಯ್ಯ ಕರ್ನಾಟಕ ಟಿವಿ ಜೊತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರವೀಣ್ ಕುಮಾರ್ ಜಿಟಿ, ಕರ್ನಾಟಕ ಟಿವಿ, ಮಂಡ್ಯ