Monday, December 23, 2024

Latest Posts

ಮಂಡ್ಯದಲ್ಲಿ ಜೆಡಿಎಸ್ ವಿರುದ್ಧ ಕಾಂಗ್ರೆಸ್ ರಣಕಹಳೆ..!

- Advertisement -

Mandya News:

ಮಂಡ್ಯದಲ್ಲಿ ವಿಧಾನಸಭಾ ಚುನಾವಣೆ ಕಾವು ದಿನೇ ದಿನೇ ರಂಗೇರ್ತಿದೆ. ಅದರಲ್ಲೂ ಕಾಂಗ್ರೆಸ್​​​ನ ಪ್ರಜಾಧ್ವನಿ ಯಾತ್ರೆ ಮೂಲಕ ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹಾಗೂ ಸ್ಥಳೀಯ ನಾಯಕರಲ್ಲಿ ಮತ್ತಷ್ಟು ಉತ್ಸಾಹ, ಹುರುಪು ತಂದಿದೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮಂಡ್ಯಗೆ ಬಂದು ಹೋದ್ಮೇಲೆ ಎಲೆಕ್ಷನ್ ಹವಾ ಮತ್ತಷ್ಟು ಜೋರಾಗ್ತಿದೆ.
ಮತ್ತೊಂದು ಕಡೆ ಮಂಡ್ಯದಲ್ಲಿ ಇತ್ತೀಚೆಗೆ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ, ಮಂಡ್ಯದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರೊ ರಾಧಾಕೃಷ್ಣ ಕೀಲಾರ, ಕಾರ್ಯಕರ್ತರನ್ನ ಸಂಘಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಡ್ಯ ಕ್ಷೇತ್ರದದ ವಿವಿಧ ಗ್ರಾಮಗಳಿಂದ ರಾಧಾಕೃಷ್ಣ ಕೀಲಾರ, ಕಾರ್ಯಕರ್ತರನ್ನ ಪ್ರಜಾಧ್ವನಿ ಯಾತ್ರೆಗೆ ಕರೆತಂದಿದ್ರು. ಹಲವು ಬಸ್​​ಗಳನ್ನ ಗ್ರಾಮಗಳಿಗೆ ಕಳುಹಿಸಿ, ಪಕ್ಷ ಸಂಘಟನೆ ಹಾಗೂ ಪ್ರಜಾಧ್ವನಿ ಯಶಸ್ಸಿಗಾಗಿ ಶ್ರಮಿಸಿದ್ರು. ಇದಕ್ಕೆ ತಕ್ಕಂತೆ ಸಾವಿರಾರು ಕಾರ್ಯಕರ್ತರು ಮಂಡ್ಯದ ಪ್ರಜಾಧ್ವನಿ ಯಾತ್ರೆಗೆ ಸಾಕ್ಷಿಯಾದ್ರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ಗೆ ಮಂಡ್ಯದಲ್ಲಿ ಪೂರ್ಣಕುಂಭ ಸ್ವಾಗತ ಕೋರುವಂತೆ ವ್ಯವಸ್ಥೆ ಮಾಡಿ ಸೈ ಎನಿಸಿಕೊಂಡ ರಾಧಾಕೃಷ್ಣ, ಸಮಾವೇಶದಲ್ಲಿ ಪ್ರತಿಯೊಬ್ಬರ ಜೊತೆಯೂ ಆತ್ಮೀಯತೆಯಿಂದ ಇದ್ದರು. ಯುವಕರು, ಮಹಿಳೆಯರು, ಹಿರಿಯರ ಬಳಿ ಆತ್ಮೀಯವಾಗಿ ಮಾತ್ನಾಡಿ, ಅವರ ಸಮಸ್ಯೆಗಳಿಗೆ ದನಿಯಾಗೋದಾಗಿ ಭರವಸೆ ನೀಡಿದ್ರು.
ಸಾವಿರಾರು ಕಾರ್ಯಕರ್ತರನ್ನ ಸಮಾವೇಶಕ್ಕೆ ಕರೆತಂತಿದ್ದ ರಾಧಾಕೃಷ್ಣ ಕೀಲಾರ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆ ರ್ಯಾಲಿಯಲ್ಲಿ ಪಾಲ್ಗೊಂಡಿದ್ರು. ಮಂಡ್ಯದಲ್ಲಿ ನಡೆದ ಬಸ್ ಯಾತ್ರೆಯಲ್ಲಿ ಡಿಕೆ ಶಿವಕುಮಾರ್ ಪಕ್ಕದಲ್ಲೇ ನಿಂತು, ಪ್ರಚಾರ ಮಾಡಿದ್ರು. ಈ ವೇಳೆ ಡಿಕೆ ಶಿವಕುಮಾರ್, ತಮಗೆ ಹಾಕಿದ ಅನಾನಸ್ ಹಾರದಲ್ಲೇ ಒಂದು ಅನಾನಸ್ ಕಿತ್ಕೊಂಡು ಬಾಯಿಯಲ್ಲೇ ಕಚ್ಚಿ ತಿಂದಿದ್ದು ಸಖತ್ ವೈರಲ್ ಆಗಿತ್ತು. ಅದೇ ರೀತಿ ರಾಧಾಕೃಷ್ಣ ಕೀಲಾರ ಕೂಡ ಹಾರದಲ್ಲಿದ್ದ ಅನಾನಸ್ ಹಣ್ಣನ್ನು ತಿನ್ನುವ ಮೂಲಕ ಅಭಿಮಾನಿಗಳ, ಕಾರ್ಯಕರ್ತರ ಪ್ರೀತಿಗೆ ಸಾಕ್ಷಿಯಾದ್ರು..
ವಿವಿಧ ಗ್ರಾಮಗಳಿಂದ ಪ್ರಜಾಧ್ವನಿಯಾತ್ರೆಗೆ ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರು ರಾಧಾಕೃಷ್ಣ ಕೀಲಾರ ಪರ ಜೈಕಾರ ಕೂಗಿದ್ರು. ರಾಧಾಕೃಷ್ಣಗೆ ಕಾಂಗ್ರೆಸ್ ಟಿಕೆಟ್ ಕೊಡಿ, ನಾವು ಗೆಲ್ಲಿಸ್ತೇವೆ ಅನ್ನೋ ಆಶಾ ಭಾವನೆಯನ್ನ, ಅಭಿಪ್ರಾಯವನ್ನ ಮಂಡ್ಯ ಕಾರ್ಯಕರ್ತರು ಹೊರ ಹಾಕಿದ್ರು.
ಇನ್ನೇನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಟಿಕೆಟ್ ಫೈನಲ್ ಆಗಲಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸಾಕಷ್ಟು ಆಕಾಂಕ್ಷಿಗಳು ಟಿಕೆಟ್​ಗಾಗಿ ಕಾಯ್ತಿದ್ದಾರೆ. ಮಂಡ್ಯದಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲಿಸಿಯೇ ಗೆಲ್ಲಿಸ್ತೀವಿ ಅಂತ ಕಾರ್ಯಕರ್ತರು, ನಾಯಕರು ಪ್ರಚಾರ ಮಾಡೋದ್ರ ಜೊತೆ ಪಣತೊಟ್ಟಿದ್ದಾರೆ..
ಒಟ್ನಲ್ಲಿ, ಮಂಡ್ಯದಲ್ಲಿ ಕಾಂಗ್ರೆಸ್ ಭಾವುಟ ಹಾರಿಸೋಕೆ ಎಲ್ಲಾ ತಯಾರಿ ನಡೀತಿದ್ದು, ಮಂಡ್ಯ ಚುನಾವಣಾ ಅಖಾಡ ಮತ್ತಷ್ಟು ರೋಚಕತೆ ಪಡೆಯೋದ್ರಲ್ಲಿ ನೋ ಡೌಟ್​..

ಪೊಲಿಟಿಕಲ್ ಬ್ಯೂರೋ, ಕರ್ನಾಟಕ ಟಿವಿ, ಮಂಡ್ಯ..

.ಮಾಜಿ ಸಚಿವ ಎ.ಮಂಜು ಜೆಡಿಎಸ್ ಟಿಕೆಟ್ ಆಕಾಂಕ್ಷಿ ಹೇಳಿಕೆ

ಕೊಡಗು: ಗಡಿಪಾರು ತಡೆಯೊಡ್ಡಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ

ಬಜೆಟ್ ನ ಯಾವುದೇ ಯೋಜನೆ ಅನುಷ್ಠಾನಕ್ಕೆ ಬರುವುದಿಲ್ಲ..!: ಸಿದ್ದರಾಮಯ್ಯ

- Advertisement -

Latest Posts

Don't Miss