Tuesday, August 5, 2025

Latest Posts

“ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ” ಒಂದು ವಿಶಿಷ್ಠ ಕಾರ್ಯಕ್ರಮ: ಸುರೇಶ್ ಗೌಡ

- Advertisement -

Mandya News:

ಸರ್ಕಾರದ ಯೋಜನೆಗಳನ್ನು ಗ್ರಾಮಸ್ಥರಿಗೆ ಒದಗಿಸಲು ಅಧಿಕಾರಿ ವರ್ಗದವರು ಗ್ರಾಮಕ್ಕೆ ಬರುವ ವಿಶಿಷ್ಟ ಕಾರ್ಯಕ್ರಮವೇ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಎಂದು ನಾಗಮಂಗಲ ಶಾಸಕ ಸುರೇಶ್ ಗೌಡ ಅವರು ತಿಳಿಸಿದರು.ಅವರು ಇಂದು ನಾಗಮಂಗಲ ‌ತಾಲ್ಲೂಕಿನ ಹರದನಳ್ಳಿಯಲ್ಲಿ ನಡೆದ‌ ಜಿಲ್ಲಾಧಿಕಾರಿಗಳ ನಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸ್ವೀಕರಿಸುವ ಸಾರ್ವಜನಿಕರ ಕುಂದು ಕೊರತೆ ಅರ್ಜಿಗಳನ್ನು ಪರಿಹರಿಸಿ ಎಂದರು.

ಪೂರ್ವಜರ ಕಾಲದಿಂದಲೂ ಜನರು ವಾಸವಾಗಿರುವ ಸ್ಥಳಕ್ಕೆ ದುರಸ್ತಾಗಿಲ್ಲ ಎಂದು ದೂರುಗಳಿವೆ. ಇಂತಹ ದೂರುಗಳನ್ನು ಅಧಿಕಾರಿಗಳು ಶೀಘ್ರ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದರು.ಗ್ರಾಮಸ್ಥರು ತಮ್ಮ ದೂರು ಅರ್ಜಿಗಳನ್ನು ಸಲ್ಲಿಸಿದ ನಂತರ ಸ್ವೀಕೃತಿ ಪಡೆದುಕೊಳ್ಳಿ ಇದರಿಂದ ಮುಂದೆ ಅರ್ಜಿಗಳ ಸ್ಥತಿಗತಿಯನ್ನು ತಿಳಿದುಕೊಳ್ಳಬಹುದು. ಶಾಂತವಾಗಿ ಕಾರ್ಯಕ್ರಮದಲ್ಲಿ ಕುಳಿತು ಅರ್ಜಿ ಸಲ್ಲಿಸಿ ಪರಿಹಾರದ ಬಗ್ಗೆ ತಿಳಿದುಕೊಳ್ಳಿ ಎಂದರು.

ಪೌತಿ ಖಾತೆ ಆಂದೋಲನ: ಜಿಲ್ಲಾಡಳಿತ ವತಿಯಿಂದ ಸ್ವಯಂ ಪ್ರೇರಿತವಾಗಿ ಪೌತಿ ಖಾತೆ ಆಂದೋಲನವನ್ನು ಹಮ್ಮಿಕೊಂಡು ಮನೆ ಮನೆ ಭೇಟಿ ನೀಡಿ ದಾಖಲೆಗಳನ್ನು ಪಡೆದುಕೊಂಡು ರಶೀದಿ ಪುಸ್ತಕ ಆರ್.ಟಿ.ಸಿ ಪಟ್ಟ ಪುಸ್ತಕ, ಪೌತಿ ಖಾತೆಯನ್ನು ಜಿಲ್ಲಾಧಿಕಾರಿ ಡಾ: ಹೆಚ್ ಎನ್ ಗೋಪಾಲಕೃಷ್ಣ ಅವರು ವಿತರಿಸಿದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವು ವಿಶೇಷವಾಗಿ ಕಂದಾಯ ಇಲಾಖೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಸಮಸ್ಯೆಯನ್ನು ಸ್ಥಳದಲ್ಲೇ ಪರಿಹರಿಸಲು ನಡೆಸಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ: ಹೆಚ್ ಎಲ್ ನಾಗರಾಜ್ ಅವರು ತಿಳಿಸಿದರು.ತಾಲ್ಲೂಕು ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳು ಸಾರ್ವಜನಿಕರ ಕೆಲಸವನ್ನು ವಿಳಂಬ ಮಾಡದೇ ಮಾಡುತ್ತಿರುವ ಬಗ್ಗೆಯು ಈ ಕಾರ್ಯಕ್ರಮದಲ್ಲಿ ಪರಿಶೀಲನೆ ನಡೆಸಲಾಗುವುದು ಎಂದರು.

ಫಲಾನುಭವಿಗಗಳಿಗೆ ಆರೋಗ್ಯ ಇಲಾಖೆಯಿಂದ ಕನ್ನಡಕ ವಿತರಣೆ, ಕಂದಾಯ ಇಲಾಖೆಯಿಂದ ಪಿಂಚಣಿ ವಿತರಣೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗಭೀರ್ಣಿ ಸ್ತ್ರಿಯರಿಗೆ ಸೀಮಂತ ಕಾರ್ಯಕ್ರಮ, ಸುಕನ್ಯ ಸಮೃದ್ಧಿ ಯೋಜನೆ ಆಯ್ಕೆ ಪತ್ರ, ಕೃಷಿ ಇಲಾಖೆ ವತಿಯಿಂದ ಜಿಲ್ಲಾ ಪಂಚಾಯತ್ ವತಿಯಿಂದ ಜಾಬ್ ಕಾಡ್೯ ವಿತರಿಸಲಾಯಿತು.

ಅಕಾರ್ ಬಂದ್ ಗೆ ಆರ್.ಟಿ.ಸಿ ಹೊಂದಣಿಕೆ ಮಾಡಿ ಕೊಡಬೇಕು,ಹರದನಹಳ್ಳಿ ಗ್ರಾಮ ಪಂಚಾಯಿತಿ ಹಳೆ ಕಟ್ಟಡ ಮತ್ತು ಸುತ್ತಮುತ್ತಲಿನ ಸ್ಥಳ ವನ್ನು‌ಸಾರ್ವಜನಿಕ ಸಮುದಾಯ ಭವನಕ್ಕೆ ಮೀಸಲಿಡಬೇಕು, ರಸ್ತೆ ನಿರ್ಮಾಣ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಗ್ರಾಮಸ್ಥರು ಅರ್ಜಿ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ‌ಅಧಿಕಾರಿ ಶಾಂತ ಎಲ್ ಹುಲ್ಮನಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ್ , ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಂಜೀವಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಧನಂಜಯ್, ನಾಗಮಂಗಲ ತಹಶೀಲ್ದಾರ್ ಸ್ವಾಮಿಗೌಡ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಚಿತ್ರದುರ್ಗ: 16ನೇ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಎಚ್.ಡಿ.ರೇವಣ್ಣ ಮನೆಗೆ ಕಾರ್ಯಕರ್ತರ ಮುತ್ತಿಗೆ

ಐ ಎ ಎಸ್ ರಶ್ಮಿ ಮಹೇಶ ಗೆ ೫೦೦೦೦ ರೂ ದಂಡ

- Advertisement -

Latest Posts

Don't Miss