ಮಂಡ್ಯ: ಕಳೆದ ಮೂರು ದಿನಗಳಿಂದ ಪಂಚರತ್ನ ರಥಯಾತ್ರೆ ಮಂಡ್ಯ ಜಿಲ್ಲೆಗೆ ಆಗಮಿಸಿದ್ದು, ಮೊದಲು ಮಳವಳ್ಳಿ ನಂತರ ಮದ್ದೂರು ಇಂದು ಮಂಡ್ಯ ನಗರಕ್ಕೆ ಆಗಮಿಸಿದೆ. ಬುದುನೂರಿನಲ್ಲಿ ಬೃಹತ್ ಕಿತ್ತಳೆ ಹಾರವನ್ನು ಹಾಕಿ ಜೆಡಿಎಸ್ ಮುಖಂಡರು, ಅಭಿಮಾನಿಗಳು ಮತ್ತು ಕಾರ್ಯಕರ್ತರು ಸ್ವಾಗತ ಕೋರಿದರು. ನಂತರ ಮಂಡ್ಯದ ಫ್ಯಾಕ್ಟರಿ ಸರ್ಕಲ್ ಗೆ ಪಂಚರತ್ನ ರಥಯಾತ್ರೆ ಆಗಮಿಸಿದೆ. ನಗರಕ್ಕೆ ಬರುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಶಕ್ತಿ ಪ್ರದರ್ಶನ ನಡೆಯುತ್ತಿದ್ದು, ಹಾಲಿ ಶಾಸಕ ಎಂ.ಶ್ರೀನಿವಾಸ್ ಗೆ ಟಿಕೆಟ್ ಘೋಷಣೆಯಾಗಿದ್ದರೂ ಕಡೇ ಕ್ಷಣದಲ್ಲಿ ಅಭ್ಯರ್ಥಿ ಬದಲಾವಣೆ ನಿರೀಕ್ಷೆ ಇದೆ.
ಅವಧಿಗೂ ಮುನ್ನ ಚುನಾವಣೆಯ ಯಾವುದೇ ಪ್ರಸ್ತಾವನೆ ಇಲ್ಲ : ಸಿಎಂ ಬೊಮ್ಮಾಯಿ
ತಮ್ಮ ಪರವಾಗಿ ಜೈಕಾರ ಕೂಗಿಸಿಕೊಳ್ಳುವ ಮೂಲಕ ವರಿಷ್ಟರ ಮನಗೆಲ್ಲಲು ಶತ ಪ್ರಯತ್ನ ಮಾಡುತ್ತಿದ್ದಾರೆ. ಮನ್ಮುಲ್ ಅಧ್ಯಕ್ಷ ರಾಮಚಂದ್ರುರಿಂದ ಶಕ್ತಿ ಪ್ರದರ್ಶನ ನಡೆದಿದೆ. ಬೆಲ್ಲ, ಕೊಬ್ಬರಿ ಹಾಗೂ ಕಬ್ಬಿನ ಹಾರಗಳನ್ನ ಹಾಕುವ ಮೂಲಕ ಸ್ವಾಗತ ಕೋರಲಾಗಿದೆ. ಹೆಚ್.ಡಿ.ಕುಮಾರಸ್ವಾಮಿ, ನಿಖಿಲ್, ರಾಮಚಂದ್ರು ಪರ ಜೈಕಾರ ಕೂಗಿ ಕಾರ್ಯಕರ್ತರ ಸಂಭ್ರಮಿಸುತ್ತಿದ್ದಾರೆ. ಯಾತ್ರೆಯುದ್ದಕ್ಕೂ ಕಾರ್ಯಕರ್ತರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಯಾತ್ರೆ ಜೊತೆಗೆ ಬೈಕ್ ರ್ಯಾಲಿಯಲ್ಲಿ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸಾಗುತ್ತಿದ್ದಾರೆ.