ಮಂಡ್ಯ : ಕಟ್ಟಡ ಕೆಲಸ ಕಾರ್ಮಿಕರು ಕೊಪ್ಪಳ ಜಿಲ್ಲೆಯಿಂದ ಮಂಡ್ಯ ಜಿಲ್ಲೆಯ ವಿದ್ಯಾಪೀಠಕ್ಕೆ ಬಂದಿದ್ರು. ಲಾಕ್ ಡೌನ್ ಅನೌನ್ಸ್ ಆಗ್ತಿದ್ದ ಹಾಗೆಯೇ ಗುತ್ತಿಗೆದಾರ ಬೆಂಗಳೂರಿಗೆ ಕಾಲ್ಕಿತ್ತ, ಆದ್ರೆ, ಕಟ್ಟಡ ಕಾರ್ಮಿಕರಿಗೆ ಕೂಲಿ ಹಣ ಸಿಗದ ಕಾರಣ ಊರಿಗೂ ಹೋಗಲಾರದೆ ಇತ್ತ ಊಟಕ್ಕೂ ಇಲ್ಲದೆ ಪರದಾಡ್ತಿದ್ರು. ಈ ವಿಷಯ ತಿಳಿತಿದಂತೆಯೇ ವಿದ್ಯಾಪೀಠ ಪಕ್ಕದ ಕೆರೆಮೇಗಳದೊಡ್ಡಿ ಗ್ರಾಮಸ್ಥರು ಕೊಪ್ಪಳದ ಕಟ್ಟಡ ಕಾರ್ಮಿಕರ ನೆರವಿಗೆ ಧಾವಿಸಿದ್ರು.. ಅವರಿಗೆ ಅಗತ್ಯ ದಿನಸಿ ಪದಾರ್ಥಗಳನ್ನ ಕೊಡುವರ ಜೊತೆಗೆ ನಿಮ್ಮ ಜೊತೆ ನಾವಿದ್ದೇವೆ ಅಂತ ಭರವಸೆ ನೀಡಿದ್ರು. ಇದಲ್ಲದೇ ಕಾರ್ಮಿಕರ ಪುಟ್ಟ ಮಕ್ಕಳಿಗೆ ಪ್ರತಿ ದಿನ ಕೆರೆಮೇಗಳದೊಡ್ಡಿ ಗ್ರಾಮಸ್ಥರು ಬೆಳಗ್ಗೆ ಸಂಜೆ ಹಾಲು ನೀಡ್ತಿದ್ದಾರೆ.. ಬೆಸಗರಹಳ್ಳಿ ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷ ಅನಂತ ಶೇಖರ್ ತಾಲೂಕು ಆಡಳಿತ ಈ ಕೂಡಲೇ ಮಧ್ಯಪ್ರವೇಶ ಮಾಡಿ ಈ ಕಾರ್ಮಿಕರಿಗೆ ಹೆಚ್ಚಿನ ನೆರವು ನೀಡುವಂತೆ ಒತ್ತಾಯಿಸಿದ್ರು. ಈ ವೇಳೆ ಗ್ರಾಮದ ಮುಖಂಡರಾದ ಗೌರೀಶ್, ಪುಟ್ಟಪ್ಪ, ಉಮೇಶ್, ನವೋದಯ ಶಿಕ್ಷಣ ಸಂಸ್ಥೆಯ ಕೃಷ್ಣಪ್ಪ ಸೇರಿದಂತೆ ಹಲವು ಯುವಕರು ಹಾಜರಿದ್ರು.
ಪ್ರವೀಣ್ ಕುಮಾರ್ ಜಿ.ಟಿ, ಕರ್ನಾಟಕ ಟಿವಿ, ಮಂಡ್ಯ



