Friday, November 22, 2024

Latest Posts

ಸಿದ್ದರಾಮಯ್ಯನವರನ್ನು ಹೊಡೆದು ಹಾಕುವುದಿರಲಿ, ತಾಕತ್ತಿದ್ದರೆ ಅವರನ್ನು ಮುಟ್ಟಿ ನೋಡಿ: ಪಿ.ಎಂ.ನರೇಂದ್ರಸ್ವಾಮಿ ಸವಾಲ್

- Advertisement -

Mandya News:

ಸಿದ್ದರಾಮಯ್ಯನವರನ್ನು ಹೊಡೆದು ಹಾಕುವುದಿರಲಿ, ತಾಕತ್ತಿದ್ದರೆ ಅವರನ್ನು ಮುಟ್ಟಿ ನೋಡಿ ಎಂದು ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್‌ನವರೇನು ಬಳೆಗಳನ್ನು ತೊಟ್ಟುಕೊಂಡಿಲ್ಲ. ಅವರೂ ಶಕ್ತಿವಂತರೇ. ನಿಮ್ಮ ಗೊಡ್ಡು ಬೆದರಿಕೆಗಳಿಗೆಲ್ಲಾ ಹೆದರೋಕೆ ಇಲ್ಲಿ ಯಾರೂ ಇಲ್ಲ. ಇದು ಅಯೋಗ್ಯತನದ ಪರಮಾವಧಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ಮಂಡ್ಯದವರ ಗತ್ತು ಪ್ರದರ್ಶಿಸುವುದು ಮಂಡ್ಯದವರಿಗಷ್ಟೇ ಗೊತ್ತು. ಆ ಗತ್ತಿನ ನಾಟಕೀಯ ಪ್ರಯೋಗ ಇಲ್ಲಿ ನಡೆಯುವುದಿಲ್ಲ. ಸಿದ್ದರಾಮಯ್ಯನವರನ್ನು ಮುಟ್ಟುವುದಕ್ಕಿಂತ ಮೊದಲು ನನ್ನನ್ನು ಎದುರಿಸಿಕೊಂಡು ಹೋಗಿ. ಆಗ ನಿಮ್ಮ ತಾಕತ್ತು ಏನೆಂದು ಗೊತ್ತಾಗುತ್ತದೆ ಎಂದು ಸವಾಲು ಹಾಕಿದರು. ಶಿಸ್ತು, ಸಂಸ್ಕೃತಿ ಎಂದೆಲ್ಲಾ ಉದ್ದುದ್ದ ಭಾಷಣ ಮಾಡುತ್ತೀರಿ. ಉನ್ನತ ಶಿಕ್ಷಣ ಸಚಿವರಾಗಿ ನೀವು ಕಲಿತಿರುವ ಸಂಸ್ಕೃತಿ ಇದೇನಾ. ಇದು ಗೂಂಡಾ ಸಂಸ್ಕೃತಿಯ ಪ್ರತೀಕ. ಧರ್ಮ, ಜಾತಿ ಆಧಾರದ ಮೇಲೆ ರಾಜಕಾರಣ ಮಾಡುವುದನ್ನು ಮಂಡ್ಯದಿಂದ ಆರಂಭಿಸಲು ಹೊರಟಿದ್ದೀರಿ. ಅದರಿಂದ ಅಧಿಕಾರ ಹಿಡಿಯುವುದು ಸುಲಭದ ಮಾತಲ್ಲ ಎಂದು ಹೇಳಿದ್ದಾರೆ. ಸಂವಿಧಾನದ ಚೌಕಟ್ಟಿನೊಳಗೆ ರಾಜಕಾರಣ ಮಾಡಿ. ಅಭಿವೃದ್ಧಿ ವಿಚಾರ, ಜನಪರ ಕಾರ್ಯಕ್ರಮಗಳ ಕುರಿತಂತೆ ಜನರ ಮುಂದಿಡಿ. ಅದನ್ನು ಬಿಟ್ಟು ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯನವರನ್ನು ಹೊಡೆದು ಹಾಕಿ ಎಂದರೆ ಏನರ್ಥ. ಇಂತಹ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಸಮಾಜದ ಶಾಂತಿಯನ್ನು ಕೆಡಿಸಿ ದ್ವೇಷ ಬೆಳೆಸಲು ಹೊರಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಅಭಿವೃದ್ಧಿಯನ್ನು ಮರೆತು ಭ್ರಷ್ಟಾಚಾರದಲ್ಲಿ ಮುಳುಗಿರುವ ಸಚಿವರು ತಮ್ಮಲ್ಲಿರುವ ಲೋಪಗಳನ್ನು ಮುಚ್ಚಿಕೊಳ್ಳಲು ಈ ರೀತಿಯ ಹಿಂಸಾತ್ಮಕ, ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಅಂಜನಾ, ವಿಜಯಕುಮಾರ್, ಸಿ.ಎಂ.ದ್ಯಾವಪ್ಪ, ಕೆ.ನಾಗರಾಜು, ನಯೀಂ ಉಪಸ್ಥಿತರಿದ್ದರು.

ಮಂಜುನಾಥನ ದರ್ಶನಕ್ಕೆ ಪಾದಯಾತ್ರೆ ಕೈಗೊಳ್ಳುವ ಯಾತ್ರಿಗಳಿಗೆ ಅನ್ನದಾಸೋಹ ಏರ್ಪಡಿಸಿದ ಪ್ರಿಯಾ ಕೃಷ್ಣ

ಅಂಬೇಡ್ಕರ್ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ ಸಲ್ಲಿಸಿ ಚಾಲನೆ ನೀಡಿದ ಬಿಜೆಪಿ ಶಾಸಕ,.ಎಂ ಸತೀಶ್ ರೆಡ್ಡಿ

ಶೋಕಿಗಾಗಿ ಗಂಡನನ್ನೇ ಕೊಂದ ಮಾರ್ಡನ್ ಮಡದಿ..!

 

- Advertisement -

Latest Posts

Don't Miss