Mandya News:
ಸರ್ವೀಸ್ ರಸ್ತೆ ಇಲ್ಲದೆ ದಶಪತ ರಸ್ತೆ ಎಂದು ಹೇಳಿಕೊಂಡು ಕಾಮಗಾರಿ ನಡೆಸುತ್ತಿರುವ ಡಿಬಿಎಲ್ ಕಂಪನಿ ಏನ್ ಎಚ್ 275 ರಸ್ತೆಯ ಕುರಿತು ಇಂದು ಡಿಸಿ ಕಚೇರಿಯ ಮುಂಭಾಗ ಕರ್ನಾಟಕ ರಕ್ಷಣಾ ವೇದಿಕೆ ಮಂಡ್ಯ ಜಿಲ್ಲಾ ಘಟಕ ಪ್ರತಿಭಟನೆ ನಡೆಸಿದರು.ಕಳೆದ ಮೂರು ದಿನಗಳಿಂದ ಮಂಡ್ಯ ನಗರದ ಹೊರವಲಯದ ಶ್ರೀನಿವಾಸಪುರ ಉಮ್ಮಡಹಳ್ಳಿ ಗೇಟ್ ಬಳಿ ಬೈಪಸ್ ರಸ್ತೆ ಬಳಿ ಸರ್ವಿಸ್ ರಸ್ತೆ ನಿರ್ಮಿಸುವಂತೆ ಪ್ರತಿಭಟನೆ ನಡೆಸಿದರು.ಡಿಬಿಎಲ್ ಕಂಪನಿ ಜನರ ಆಗ್ರಹವನ್ನು ಗಣನೆಗೆ ತೆಗೆದುಕೊಳ್ಳದೆ ಕಾಮಗಾರಿ ನಡೆಸುತ್ತಿದೆ.
ಇದೊಂದು ಅವೈಜ್ಞಾನಿಕ ಕಾಮಗಾರಿಯಾಗಿದ್ದು, ಈ ಸಂಬಂಧ ತಾವುಗಳು ತುರ್ತಾಗಿ ಸಭೆ ಕರೆದು ಈ ಕೆಳಕಂಡ ನಮ್ಮ ಆಗ್ರಹಗಳ ಕುರಿತು ಚರ್ಚಿಸುವಂತೆ ಮನವಿ ಮಾಡುತ್ತೇವೆ. ಬೆಂಗಳೂರು ಮೈಸೂರು ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ನಿರ್ಮಾಣ ವಿರೋಧಿಸಿ ನಡೆಸಿದ ಪ್ರತಿಭಟನೆಯ ಆಗ್ರಹಗಳು, ಉಮೃಡವಳ್ಳಿ ಗೇಟ್ ಬಳಿ ಸರ್ವಿಸ್ ರಸ್ತೆ ನಿರ್ಮಿಸಬೇಕು. ಗುಣಮಟ್ಟದ ಕಾಮಗಾರಿಯಲ್ಲಿ ಟೋಲ್ ರಸ್ತೆ ಹಾಗೂ ಸರ್ವಿಸ್ ರಸ್ತೆ ನಿರ್ಮಿಸಬೇಕು, ಬೆಂಗಳೂರು ಮೈಸೂರು ರಸ್ತೆಯುದ್ದಕ್ಕೂ ಬರುವ ಗ್ರಾಮಗಳ ಗ್ರಾಮಸ್ಥರಿಗೆ ಈ ರಸ್ತೆ ಬಳಕೆಗೆ ಯಾವುದೆ ಟೋಲ್ ವಿಧಿಸಬಾರದು. ಹೆದ್ದಾರಿ ನಿರ್ಮಾಣದ ಹೆಸರಿನಲ್ಲಿಇದೊಂದು ಬಹುಸಿ ಎರ ಕೋಟಿ ಹಗರಣವಾಗಿದ್ದು, ಇಡೀ ಯೋಜನೆಯ ಪ್ರಕ್ರಿಯೆಯನ್ನು ಸಿಬಿಐ ತನಿಖೆಗೆಒಳಪಡಿಸಬೇಕು. ಯೋಜನೆಯ ಮೂಲನಕ್ಕೆ ಹಾಗೂ ಯೋಜನೆಯ ವಿವರಗಳ ಕಾಮಗಾರಿಗಳ ವಿವರವಾದ ನಾಮಫಲಕವನ್ನು ಕಾಮಗಾರಿ ಸ್ಥಳಗಳಲ್ಲಿ ನಿಯಮಾನುಸಾರ ಪ್ರಕಟಿಸಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಡಿ.ಬಿ.ಎಲ್ ಕಂಪನಿಯ ಜತೆಗಿನ ಒಪ್ಪಂದ ಬಹಿರಂಗಪಡಿಸಬೇಕು. ಪರಿಹಾರ ವಿತರಣೆಯಲ್ಲಿ ತಾರತಮ್ಯ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಭೂಸ್ವಾಧೀನಪಡಿಸಿಕೊಂಡು ರೈತರು, ಸಾರ್ವಜನಿಕರಿಗೆ ಪರಿಹಾರ ವಿತರಣೆಯಲ್ಲಿ ತಾರತಮ್ಯವಾಗಿದ್ದು, ತಕ್ಷಣ ಸರಿಪಡಿಸಿ ಎಲ್ಲರಿಗೂ ಸಮಾನವಾದ ಪರಿಹಾರ ವಿತರಣೆ ಮಾಡಬೇಕು. ಪರಿಹಾರ ವಿತರಣೆಯಲ್ಲಿ ಪ್ರಾಧಿಕಾರದ ಅಧಿಕಾರಿಗಳು ಹಣ ದುರುಪಯೋಗಪಡಿಸಿಕೊಂಡಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿಸ್ಟರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಾವಿರಾರು ಕೋಟಿ ಹಣ ಖರ್ಚು ಮಾಡಿ ಎನ್.ಹೆಚ್, 275 ದಶಪಥ
ದಶಪಥ ರಸ್ತೆ ನಿರ್ಮಾಣ ಮಾಡುತ್ತಿದ್ದು, ವೈಜ್ಞಾನಿಕವಾಗಿ ರಸ್ತೆ ನಿರ್ಮಿಸದೆ ಕಾರತುರಿಯಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸುತ್ತಿರುವುದನ್ನು ನೋಡಿದರೆ ವ್ಯಾಪಕ ಭ್ರಷ್ಟಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಕೇಂದ್ರ ಸರ್ಕಾರ ರಸ್ತೆ ಕಾಮಗಾರಿಗಾಗಿ ಗುತ್ತಿಗೆ ನೀಡಿರುವ ಮೇ: ದಿಲೀಪ್ ಬಿಲ್ಸ್ಕನ್ ಸ್ಟಕ್ಷನ್ ಕಂಪನಿಗೆ ಪ್ರಾರಂಭದಲ್ಲಿ ರೂ.4200 ಕೋಟಿಗೆ ನೀಡಿದ ಗುತ್ತಿಗೆಯನ್ನು 2018-19ರಲ್ಲಿ ಈ 8400 ಕೋಟಿಗೆ ದ್ವಿಗು ಗೊಳಿಸಿ ಗುತ್ತಿಗೆ ನೀಡಿದ್ದರೂ ಸಹ ಗುಣಮಟ್ಟದ ರಸ್ತೆ ಕಾಮಗಾರಿ ನಿರ್ವಹಣೆ ಮಾಡದೇ ಕಳಪೆ ಉಮಗಾರಿ ಒಳ ಚರಂಡಿ ವ್ಯವಸ್ಥೆ ಮಾಡುತ್ತಿರುವುದು ಕಂಡು ಬಂದಿರುತ್ತದೆ, ಎಂದು ಡಿಸಿ ಕಚೇರಿಯ ಮುಭಾಗದಲ್ಲಿ ಪ್ರತಿಭಟನೆ ನಡೆಸಿದರು.