- Advertisement -
ನಾಡಿನೆಲ್ಲೆಡೆ 75 ರ ಸ್ವಾತಂತ್ರ್ಯೋತ್ಸವ ಸಂಭ್ರಮ ಆಚರಿಸಲಾಗುತ್ತಿದೆ.ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಿಂದ ಆಚರಿಸಲಾಯಿತು.
ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಚಿವ ಆರ್.ಅಶೋಕ್ ಧ್ವಜಾರೋನಹಣ ನೆರವೇರಿಸಿದರು. ಧ್ವಜಾರೋಹಣದ ನಂತರ ಬಳಿಕ ರಾಷ್ಟ್ರಗೀತೆ,ನಾಡಗೀತೆ ಹಾಗೂ ರೈತಗೀತೆಗೆ ಗೌರವ ಸೂಚಿಸಲಾಯಿತು. ಇದೇ ಸಂದರ್ಭದಲ್ಲಿ ಪಥಸಂಚಲನದ ಮೂಲಕ ತುಕಡಿಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು. ಸಚಿವ ಆರ್.ಅಶೋಕ್ ತೆರೆದ ವಾಹನದಲ್ಲಿ ತೆರಳಿ ಗೌರವ ಸಲ್ಲಿಸಿದರು.ಸಂಸದೆ ಸುಮಲತಾ ಅಂಬರೀಶ್, ಎಂ.ಶ್ರೀನಿವಾಸ್, ಡಿಸಿ ಅಶ್ವಥಿ, ಎಸ್ಪಿ ಎನ್.ಯತೀಶ್, ನಗರಸಭೆ ಅಧ್ಯಕ್ಷ ಸೇರಿದಂತೆ ಹಲವರು ಈ ಭವ್ಯ ಸಮಯಕ್ಕೆ ಸಾಕ್ಷಿಯಾದ್ರು.
- Advertisement -