Mandya News:
ಮಂಡ್ಯದಲ್ಲಿನ ಅಶೋಕ್ ಗೋ ಬ್ಯಾಕ್ ಅಭಿಯಾನದ ಕುರಿತಾಗಿ ಪ್ರತಿಕ್ರಿಯೆ ನೀಡಿದ ಕಂದಾಯ ಸಚಿವ ಆರ್ ಅಶೋಕ್, ಮಂಡ್ಯಕ್ಕೆ ಅಶೋಕ್ ಬಂದಿರೋದಕ್ಕೆ ಕಾಂಗ್ರೆಸ್-ಜೆಡಿಎಸ್ ಗೆ ಭಯ ಹುಟ್ಟಿದೆ.’ ನನ್ನ ಮೇಲೆ ಷಡ್ಯಂತ್ರ ರೂಪಿಸೋಕೆ ಯಾರಿಗೂ ಧೈರ್ಯ ಇಲ್ಲ.
ಅಶೋಕ್ ಯಾವ ಹೊಂದಾಣಿಕೆ ರಾಜಕಾರಣ ಮಾಡಲ್ಲ. ಇದು ನಮ್ಮ ಪಕ್ಷದ ಸಂಸ್ಕೃತಿ ಅಲ್ಲ.ಅ ತರಹದು ಯಾವುದು ಸಹ ಇಲ್ಲ.ಉಸ್ತುವಾರಿ ಸಚಿವರಿಗಾಗಿ 2 ಸಾವಿರ ಬೈಕ್ ಮೆರವಣಿಗೆ ಮಾಡಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ರು.ಪ್ರಬಲವಾಗಿ ಬಂದಾಗ ಈ ರೀತಿಯಾಗಿ ಅಪಪ್ರಚಾರ ಬರ್ತಿದೆ ಅಷ್ಟೆ.ನೋಡೋಣಾ ಯಾರು ಮಾಡಿದ್ದಾರೆ ಅಂತ.ಕಾಂಗ್ರೆಸ್ ಅಥವಾ ಜೆಡಿಎಸ್ ನವರ ಅಂತ ನೋಡೊಣಾ.ನಮ್ಮ ಕಾರ್ಯಕರ್ತರನ್ನು ಜೊತೆಯಾಗಿ ಕರೆದೊಯ್ಯುವ ಕೆಲಸ ಮಾಡ್ತೇನೆ.
ಬಹಳಷ್ಟು ಬದಲಾವಣೆ ತರ್ತೇನೆ. ಇದು ವರೆಗೂ ಯಾರು ಅಸಮಾಧಾನ ವ್ಯಕ್ತಪಡಿಸಿಲ್ಲ.ನಾನು ಬಂದಿರುವುದಕ್ಕೆ ಕೆಲವರಿಗೆ ಭಯ ಹುಟ್ಟಿದೆ.ಬೇರೆ ಪಕ್ಷದವರು ಎತ್ತಿ ಕಟ್ಟುತ್ತಿದ್ದಾರೆ.ನಮ್ಮ ಪಕ್ಷದವರು ಯಾರು ಈ ರೀತಿ ಮಾಡಲ್ಲ.
ನನ್ನ ಮೇಲೆ ಷಡ್ಯಂತ್ರ ರೂಪಿಸುವ ಧೈರ್ಯ ಯಾರಿಗೂ ಇಲ್ಲ.ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದರು.
ಆರ್.ಅಶೋಕ್ ವಿರುದ್ಧ ಗೋ ಬ್ಯಾಕ್ ಅಭಿಯಾನ…! ಸ್ವ-ಪಕ್ಷೀಯರಿಂದಲೇ ವಿರೋಧ..?!
ದಾವಣಗೆರೆ: ಗಣರಾಜ್ಯೋತ್ಸವ ಸಂಭ್ರಮ,ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ: