ಕರ್ನಾಟಕ ಟಿವಿ ಮಂಡ್ಯ : ಒಂದೆಡೆ ಮಂಡ್ಯ ಕಬ್ಬು ಬೆಳೆಗಾರರು ಬೆಳೆದ ಕಬ್ಬನ್ನ ಕಟಾವು ಮಾಡೋದು ಹೇಗೆ, ಸಾಲ ತೀರಿಸೋದು ಹೇಗೆ ಅಂತ ಯೋಚನೆ ಮಾಡ್ತಿದ್ದಾರೆ. ಮತ್ತೊಂದೆಡೆ ಮೈಷುಗರ್ ಪುನರಾರಂಭ ಕುರಿತಂತೆ ಹಗ್ಗಜಗ್ಗಾಟ ಶುರುವಾಗಿದೆ. ಸಂಸದೆ ಸುಮಲತಾ ಸೇರಿದಂತೆ ಬಹುತೇಕ ಕಬ್ಬು ಬೆಳೆಗಾರರು ಯಾರಾದ್ರೂ ನಡೆಸಲಿ ಮೊದಲು ಫ್ಯಾಕ್ಟರಿ ಶುರುವಾಗಲಿ ಅಂತಿದ್ದಾರೆ. ಆದ್ರೆ, ಕೆಲ ಹೋರಾಟಗಾರರು ಮಾತ್ರ ಮೈಷುಗರ್ ಫ್ಯಾಕ್ಟರಿಯನ್ನ ಸರ್ಕಾರವೇ ನಡೆಸಲಿ ಅಂತಿದ್ದಾರೆ..ಇಂದು ಮೈಷುಗರ್ ಸಕ್ಕರೆ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೆ ಉಳಿಯುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿದ್ರು. ಮಂಡ್ಯದ ಜಿಲ್ಲಾಧಿಕಾರಿ ಕಛೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಕೆಲವೇ ಬೆರಳೆಣಿಕೆ ಸದಸ್ಯರು ಹಾಗೂ ವಿವಿಧ ಸಂಘಟನೆ ವತಿಯಿಂದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ರು. ಮಾಜಿ ಸಂಸದ ಜಿ.ಮಾದೇಗೌಡ ಮಾತನಾಡಿ ಸರ್ಕಾರವೇ ಮೈಷುಗರ್ ನಡೆಸಬೇಕು, ಜುಲೈನಲ್ಲೇ ಫ್ಯಾಕ್ಟರಿ ಪ್ರಾರಂಭ ಮಾಡಬೇಕು ಅಂತ ಒತ್ತಾಯ ಮಾಡಿದ್ರು. ಯಾವುದೇ ಕಾರಣಕ್ಕೂ ಖಾಸಗೀಕರಣ ಹಾಗೂ ಒ & ಎಂ ಗೆ ನೀಡಬಾರದೇಂದು ಆಗ್ರಹ ಪಡಿಸಿದ್ರು. ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗುತ್ತಾ ಆಕ್ರೋಶವ್ಯಕ್ತಪಡಿಸಿದ್ರು. ನಂತರ ಡಿಸಿ ಡಾ ವೇಂಕಟೇಶ್ ಅವರಿಗೆ ಮನವಿ ಸಲ್ಲಿಸಿದ್ರು..
ಕಬ್ಬು ಬೆಳೆಗಾರರು ಈಗಾಗಲೇ ಕಬ್ಬು ಕಟಾವು ಮಾಡಲಾಗದೆ ಕಂಗಾಲಾಗಿದ್ದಾರೆ.. ಮೈಷುಗರ್ ಆರಂಭವಾಗದಿದ್ದರೆ ಕೊಪ್ಪ ಅಥವಾ ಕೆ.ಎಂ ದೊಡ್ಡಿ ಫ್ಯಾಕ್ಟರಿಗೆ ಕಬ್ಬು ಸರಬರಾಜು ಮಾಡುವ ಅನಿವಾರ್ಯತೆ ಎದುರಾಗಲಿದೆ. ಇದೀಗ ಬಹುತೇಕ ಕಬ್ಬು ಬೆಳೆಗಾರರು ಖಾಸಗಿಯೋ, ಸರ್ಕಾರವೋ ಯಾರಾದ್ರೂ ಫ್ಯಾಕ್ಟರಿ ನಡೆಸಿ ಅಂತಿದ್ದಾರೆ. ಮತ್ತೊಂದೆಡೆ ಇದೀಗ ಪ್ರತಿಭಟನೆ ಮಾಡ್ತಿರುವ ಕೆಲವರು ಲೋಕಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ವಿರುದ್ಧವಾಗಿ ಕೆಲಸ ಮಾಡಿದ್ರು.. ಈಗಲೂ ಸಹ ಫ್ಯಾಕ್ಟರಿ ಪುನರಾರಂಭವಾದರೆ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಕ್ರೆಡಿಟ್ ಹೋಗುತ್ತೆ ಅಂತ ಈ ರೀತಿ ಅಡ್ಡಿ ಮಾಡ್ತಿದ್ದಾರೆ ಅಂತ ಸುಮಲತ ಬೆಂಬಲಿಗರು ಆರೋಪಿಸಿದ್ದಾರೆ..
ಪ್ರವೀಣ್ ಕುಮಾರ್ ಜಿ.ಟಿ, ಕರ್ನಾಟಕ ಟಿವಿ, ಮಂಡ್ಯ