Mandya News:
ಮಂಡ್ಯ ಜಿಲ್ಲೆಯಲ್ಲಿ ನೂತನ ಕೇಂದ್ರೀಯ ವಿದ್ಯಾಲಯ ಕಟ್ಟಡ ನಿರ್ಮಾಣಕ್ಕೆ ಕೇಂದ್ರದಿಂದ 25.00 ಕೋಟಿ ಅನುದಾನ ಬಿಡುಗಡೆಗೊಂಡಿರುವ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಕೂಲವಾಗುವಂತೆ ಕೇಂದ್ರೀಯ ವಿದ್ಯಾಲಯ ಶಾಲೆಯನ್ನು ಮೈ ಶುಗರ್ ಪ್ರೌಢಶಾಲೆಗೆ ಸ್ಥಳಾಂತರಿಸುವ ಸಂಬಂಧ ಹಾಗೂ ಶಾಲೆಯ ಪ್ರಗತಿ ಕುರಿತು ಇಂದು ದಿನಾಂಕ: 13/09/2022 ರಂದು ಮಂಡ್ಯ ಸಂಸದರಾದ ಶ್ರೀಮತಿ ಸುಮಲತಾ ಅಂಬರೀಶ್ ರವರು ಮಂಡ್ಯ ತಾಲೂಕಿನ ಬಿ.ಹೊಸೂರು ಕಾಲೋನಿಯಲ್ಲಿರುವ ಕೇಂದ್ರೀಯ ವಿದ್ಯಾಲಯ ಶಾಲೆಗೆ ಭೇಟಿ ನೀಡಿ, ಜಿಲ್ಲಾಧಿಕಾರಿಗಳು, ಮಂಡ್ಯ ಉಪ ವಿಭಾಗ ಅಧಿಕಾರಿಗಳು, ಪ್ರಾಂಶುಪಾಲರು, CPWD ಅಧಿಕಾರಿಗಳು, ಮೈ ಶುಗರ್ ಹಳೆ ವಿದ್ಯಾರ್ಥಿಗಳ ಸಂಘದ ಸದಸ್ಯರು ಹಾಗೂ ಪೋಷಕರೊಂದಿಗೆ ಶಾಲೆಯ ಶೈಕ್ಷಣಿಕ ವ್ಯವಸ್ಥೆ, ಶಾಲೆಯ ತಾತ್ಕಾಲಿಕ ಸ್ಥಳಾಂತರ ಹಾಗೂ ಶಿಕ್ಷಕರ ಕೊರತೆ, ಕಟ್ಟಡ ನಿರ್ಮಾಣ ಕಾಮಗಾರಿಯ ಪ್ರಗತಿ ಸೇರಿದಂತೆ ಇನ್ನಿತರ ವಿಚಾರಗಳನ್ನು ಚರ್ಚಿಸಿದರು.
ಇದೆ ವೇಳೆ ಕೇಂದ್ರೀಯ ವಿದ್ಯಾಲಯ ಶಾಲೆಯನ್ನು ಮೈ ಶುಗರ್ ಪ್ರೌಢಶಾಲೆಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಿದ ನಂತರ ವಿದ್ಯಾರ್ಥಿಗಳಿಗೆ ಅನಾನುಕೂಲವಾಗದಂತೆ ಮೈ ಶುಗರ್ ಪ್ರೌಢಶಾಲೆಯಲ್ಲಿ ಶೌಚಾಲಯ ಹಾಗೂ ಶಾಲೆಯ ಕೊಠಡಿಗಳಲ್ಲಿ ಮೂಲಭೂತ ಸೌಕರ್ಯ ಮತ್ತು ಪೀಠೋಪಕರಣಗಳ ವ್ಯವಸ್ಥೆ ಕಲ್ಪಿಸಲು ಹೆಚ್ಚುವರಿ ಅನುದಾನದ ಅವಶ್ಯಕತೆ ಇದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ ಹಿನ್ನೆಲೆಯಲ್ಲಿ ಆ ಕೂಡಲೇ ಸಂಸದರ ನಿಧಿಯಿಂದ ಅವಶ್ಯವಿರುವ ಹೆಚ್ಚುವರಿ ಅನುದಾನವನ್ನು ನೀಡುವುದಾಗಿ ಸಭೆಗೆ ಮಾನ್ಯ ಸಂಸದರು ತಿಳಿಸಿದರು. ನಂತರ ಕೇಂದ್ರೀಯ ವಿದ್ಯಾಲಯ ಶಾಲೆಯಲ್ಲಿ 23 ಜನ ಶಿಕ್ಷಕರ ಅವಶ್ಯಕತೆ ಇದ್ದು ಈ ಪೈಕಿ ಕೇವಲ 3ಜನ ಶಿಕ್ಷಕರು ಶಾಶ್ವತ ಹುದ್ದೆಯವರಾಗಿದ್ದು ಉಳಿದ 20 ಜನ ಶಿಕ್ಷಕರು ಗುತ್ತಿಗೆ ಆಧಾರದ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಮನಗಂಡು ಕೂಡಲೇ ಈ ಕುರಿತು ಕೇಂದ್ರ ಶಿಕ್ಷಣ ಸಚಿವರಿಗೆ ಪತ್ರದ ಮೂಲಕ ಗಮನಕ್ಕೆ ತರುವುದಾಗಿ ಹಾಗೂ ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಈ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಸಭೆಗೆ ತಿಳಿಸಿದರು.
RSS ಖಾಕಿ ಚಡ್ಡಿಗೆ ಬೆಂಕಿಹಚ್ಚಿದ ಫೋಟೋ: ಕಾಂಗ್ರೆಸ್ ವಿರುದ್ಧ ತೇಜಸ್ವಿ ಸೂರ್ಯ ಕಿಡಿ
“ಸಿಟಿ ರವಿಗೆ ಲೂಟಿ ರವಿ ಎಂದಿದ್ದು ಚೇಳು ಕಚ್ಚಿದಂತಾಗಿದೆ “: ದಿನೇಶ್ ಗುಂಡೂರಾವ್