Monday, December 23, 2024

Latest Posts

ರೈತರಿಂದ 25 ಟನ್ ತರಕಾರಿ ಖರೀದಿ ಜನರಿಗೆ ಉಚಿತ ಹಂಚಿಕೆ

- Advertisement -

ಮಂಡ್ಯ : ಕೊರೊನಾ ಹಿನ್ನೆಲೆ ಇಡೀ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿದೆ.. ಲಾಕ್ ಡೌನ್ ಜನಸಾಮಾನ್ಯರಿಗೆ ಹಾಗೂ ಬೆಳೆ ಬೆಳೆದ ರೈತರಿಗೆ ದೊಡ್ಡ ಸಮಸ್ಯೆ ತಂದೊಡ್ಡಿದ.  ದುಡಿಮೆ ಇಲ್ಲದೆ ದಿನಸಿ ತರಕಾರಿ ಖರೀದಿಗೆ ಕಷ್ಟ ಪಡುತ್ತಿದ ಜನ, ಬೆಳೆದ ತರಕಾರಿ ಬೆಳೆ ಮಾರಾಟ ಮಾಡಲಾಗದೆ ಕಂಗಾಲಾಗಿದ್ದ ರೈತ, ಇಬ್ಬರನ್ನೂ ಮಂಡ್ಯ ಜಿಲ್ಲೆಯ  ಶ್ರೀರಂಗಪಟ್ಟಣದ ಸಮಾಜ ಸೇವಕ ಸಚ್ಚಿದಾನಂದ ಕೈಹಿಡಿದಿದ್ದಾರೆ..  ತರಕಾರಿ ಬೆಳೆದ ರೈತರಿಂದ ಸುಮಾರು 25 ಟನ್ ಅಷ್ಟು ಖರೀದಿ ಮಾಡಿದ್ದಾರೆ.. ಒಂದೊಳ್ಳೆಯ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ ನಾರಾಯಣಗೌಡ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಡಾ ಎಂ ವಿ ವೆಂಕಟೇಶ್ ಆಗಮಿಸಿ ಅವರ ನೇತೃತ್ವದಲ್ಲಿ ಬಡಜನರಿಗೆ 25 ಟನ್ ತರಕಾರಿಯನ್ನ ಶ್ರೀರಂಗಪಟ್ಟಣ ತಾಲೂಕಿನ ಕೊತ್ತತ್ತಿ ಗ್ರಾಮದ ಬಡಜನರಿಗೆ ಉಚಿತ ವಿತರಣೆ ಮಾಡಿದ್ರು.

ಸಚ್ಚಿದಾನಂದ ಕೆಲಸದಿಂದ ರೈತರ, ಜನರು ನಿರಾಳ..!

ಇನ್ನು ಸಮಾಜಸೇವಕ ಸಚ್ಚಿದಾನಂದ ಈ ಕಾರ್ಯಕ್ಕೆ ಜನರು, ರೈತರು ಮೆಚ್ಚಿಕೊಂಡಿದ್ದಾರೆ.. ಯಾಕಂದ್ರೆ ಬೆಳೆದ ಬೆಳೆ ಮಾರಾಟವಾಗಲ್ಲ ಅಂತ ಕಂಗಾಲಾಗಿದ್ದ ರೈತ, ದುಡಿಮೆ ಇಲ್ಲ ತರಕಾರಿ ದಿನಸಿ, ಖರೀದಿ ಹೇಗೆ ಅಂತಿದ್ದ ಜನ .. ಇಬ್ಬರ ಚಿಂತೆಯನ್ನೂ ಸಚ್ಚಿದಾನಂದ ದೂರ ಮಾಡಿದ್ದಾರೆ..  ಜನ ಸಹ ಈ ಲಾಕ್ ಡೌನ್ ಅವಧಿಯಲ್ಲಿ ಮಾತ್ರ ಈ ನೆರವನ್ನ ನಿರೀಕ್ಷೆ ಮಾಡ್ತಾರೆ..ಅವಕಾಶ ಇದ್ದಾಗ ಸ್ವಾಭಿಮಾನಿಗಳಾಗಿ ದುಡಿದು ತಿಂತಾರೆ.. ಇಂಥಹ ಸಂದರ್ಭದಲ್ಲಿ ಜನರ ನೆರವಿಗೆ ನಿಲ್ಲೋರೇ ನಿಜವಾದ ನಾಯಕರು..

ಪ್ರವೀಣ್ ಕುಮಾರ್, ಕರ್ನಾಟಕ ಟಿವಿ, ಮಂಡ್ಯ

- Advertisement -

Latest Posts

Don't Miss