ಕಬ್ಬಿನ ಗದ್ದೆಯಲ್ಲಿ ಎರಡು ಚಿರತೆ ಮರಿಗಳು ಪತ್ತೆ.

ಮಂಡ್ಯ : ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ   ತುಳಸಿ ಗ್ರಾಮದ ತೊಪಯ್ಯನ ಮಂಜೇಗೌಡರ ಕಬ್ಬಿನ ಗದ್ದೆಯಲ್ಲಿ ಎರಡು ಚಿರತೆ ಮರಿಗಳು ಕಂಡು ಬಂದಿವೆ. ಕಬ್ಬು ಕಟಾವು ಮಾಡುವ ಕೂಲಿ ಕಾರ್ಮಿಕರು ಕಬ್ಬಿನ ಗದ್ದೆಯಲ್ಲಿ ಕಬ್ಬು ಕಟಾವು ಮಾಡುವ ಸಂದರ್ಭದಲ್ಲಿ ಎರಡು ಚಿರತೆ ಮರಿಗಳು ಗೋಚರಿಸಿದ್ದು.. ಚಿರತೆ ಮರಿಗಳು ಲವಲವಿಕೆಯಿಂದ ಓಡಾಡುತ್ತಿದ್ದು ಈ ಗ್ರಾಮದ ರೈತರ ಆತಂಕಕ್ಕೆ ಕಾರಣವಾಗಿದೆ. ಕೃಷ್ಣರಾಜಪೇಟೆ ವಲಯ ಅರಣ್ಯ ಇಲಾಖೆಗೆ ತಿಳಿಸಲಾಗಿದ್ದು ಪ್ರಭಾರ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್, ಸಹಾಯಕ ಅರಣ್ಯಾಧಿಕಾರಿ ರಾಘವೇಂದ್ರ ಮತ್ತು ಅರಣ್ಯ ಸಿಬ್ಬಂಧಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಬೋನನ್ನು ಜಮೀನಿನಲ್ಲಿಟ್ಟು ಮರಿಗಳಿಗೆ ಹಾಲುಣಿಸಲು ಆಗಮಿಸುವ ಸಾಧ್ಯತೆಗಳಿರುವುದರಿಂದ ಚಿರತೆ ಸೆರೆಹಿಡಿಯಲು  ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಕಿಕ್ಕೇರಿ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶಿವಮಂಜು ಮತ್ತು ಸಿಬ್ಬಂಧಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಚಿರತೆ ಮರಿಯನ್ನು ನೋಡಲು ಮುಗಿಬಿದ್ದಿರುವ ಜನರನ್ನು ನಿಯಂತ್ರಿಸಲು ಹರಸಾಹಸ ಮಾಡುತ್ತಿದ್ದಾರೆ.

ಪ್ರವೀಣ್ ಕುಮಾರ್ ಜಿಟಿ, ಕರ್ನಾಟಕ ಟಿವಿ, ಮಂಡ್ಯ

https://www.youtube.com/watch?v=6Wez-4ZBcvY

ಸತ್ಯ, ನೇರ, ನಿಷ್ಠೂರ ಸುದ್ದಿಗಳಿಗಾಗಿ ಕರ್ನಾಟಕ ಟಿವಿ ಯನ್ನ ಫಾಲೋಮಾಡಿ.. ಕರ್ನಾಟಕ ಟಿವಿ. ಇದು ಕನ್ನಡಿಗರ ಧ್ವನಿ

About The Author