“ಸೈರನ್” ನಲ್ಲಿ ಮಂಗ್ಲಿ ಹಾಡು
ಡೆಕ್ಕನ್ ಕಿಂಗ್ ಮೂವೀ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿಜು.ಶಿವಾನಂದ್ ನಿರ್ಮಿಸಿರುವ, ರಾಜ ವೆಂಕಯ್ಯ ನಿರ್ದೇಶನದಲ್ಲಿ ಪ್ರವೀರ್ ಶೆಟ್ಟಿ ನಾಯಕರಾಗಿ ನಟಿಸಿರುವ “ಸೈರನ್” ಚಿತ್ರದ ಹಾಡೊಂದನ್ನು ಖ್ಯಾತ ಗಾಯಕಿ ಮಂಗ್ಲಿ ಹಾಡಿದ್ದಾರೆ.
ಚಿನ್ಮಯ್ ಬಾವಿಕೆರೆ ಬರೆದಿರುವ “ಎಣ್ಣೆ ಹೊಡೆಯೋ ಟೈಮಲ್ಲಿ ನನ್ನ ಸ್ವಲ್ಪ ನೆನಸಿಕೊಳ್ಳಿ” ಎಂಬ ಹಾಡನ್ನು ಮಂಗ್ಲಿ ಹಾಡಿದ್ದಾರೆ. ಈ ಹಾಡಿನ ಲಿರಿಕಲ್ ವಿಡಿಯೋ ಜನವರಿ 24 ರಂದು ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಲಿದೆ. ಭಾರದ್ವಾಜ್ ಸಂಗೀತ ನೀಡಿದ್ದಾರೆ.ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ.
ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಅವರ ಪುತ್ರ ಪ್ರವೀಣ್ ಶೆಟ್ಟಿ ಈ ಚಿತ್ರದ ಮೂಲಕ ನಾಯಕರಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಲಾಸ್ಯ “ಸೈರನ್” ಚಿತ್ರದ ನಾಯಕಿ. ಶರತ್ ಲೋಹಿತಾಶ್ವ, ಅಚ್ಯತಕುಮಾರ್, ಪವಿತ್ರ ಲೋಕೇಶ್, ಸ್ಪರ್ಶ ರೇಖ, ಸಾಯಿ ಧೀನ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.ನಾಗೇಶ್ ವಿ ಆಚಾರ್ಯ ಛಾಯಾಗ್ರಹಣ, ವಾಲಿ ಕುಲೇಸ್ ಸಂಕಲನ, ಚಂದ್ರು ಬಂಡೆ, ನರಸಿಂಹ ಸಾಹಸ ನಿರ್ದೇಶನ ಹಾಗೂ ಕಲೈ ಅವರ ನೃತ್ಯ ನಿರ್ದೇಶನವಿರುವ “ಸೈರನ್” ಚಿತ್ರದ ಸಹ ನಿರ್ಮಾಪಕರು ಜುನಿ ಜೋಸೆಫ್ ಮತ್ತು ಕೆ.ರಮೇಶ್.