ಮಂಗಳೂರು:ಕಲ್ಲುಗಳನ್ನು ಹಾಕಿ ರಸ್ತೆ ಗುಂಡಿ ಮುಚ್ಚಿದ ವಿದ್ಯಾರ್ಥಿಗೆ ಸಾರ್ವಜನಿಕರಿಂದ ಮೆಚ್ಚುಗೆ

Manglore news updates:

ಮಂಗಳೂರು: ಕಂಕನಾಡಿ ಹೂವಿನ ಮಾರುಕಟ್ಟೆ ಬಳಿ ವಿದ್ಯಾರ್ಥಿಯೊಬ್ಬ ರಸ್ತೆ ಬದಿಯ ಗುಂಡಿಗೆ ಕಲ್ಲುಗಳನ್ನು ಹಾಕಿ ಮುಚ್ಚಿದ ಘಟನೆ ನಡೆದಿದೆ. ಬಾಲಕನ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಾಂಕ್ರಿಟ್ ರಸ್ತೆಯಂಚಿನಲ್ಲಿ ಗುಂಡಿಯಿಂದ ಬೈಕ್ ಸವಾರರಿಗೆ, ಪಾದಚಾರಿಗಳಿಗೆ ತೊಂದರೆ ಉಂಟಾಗುತ್ತಿರುವುದನ್ನು ಗಮನಿಸಿದ ವಿದ್ಯಾರ್ಥಿ ರಸ್ತೆಯ ಗುಂಡಿಯನ್ನು ಮುಚ್ಚಿದ್ದಾನೆ.

ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಎಂ. ಜಿ. ಹೆಗಡೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ನಾಳೆಯ ಭರವಸೆಯ ಬೆಳಕು ಈ ವಿದ್ಯಾರ್ಥಿ. ಆತನಿಗೆ ಶುಭವಾಗಲಿ ಎಂದು ಬರೆದು ಕೊಂಡಿದ್ದು, ಇದೀಗ ಈ ವಿಡೀಯೋ ವೈರಲ್ ಆಗಿದೆ.

ಚಿಕ್ಕಮಗಳೂರು: ರಂಭಾಪುರಿ ಶ್ರೀಗಳ ಮುಂದೆ ಸಿದ್ದು ಪಶ್ಚಾತ್ತಾಪ…!

BREAKING: ಸಿಬಿಐನಿಂದ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಸೇರಿ 15 ಜನರ ವಿರುದ್ಧ ಅಬಕಾರಿ ನೀತಿ ‘ಹಗರಣ’ದಲ್ಲಿ ಎಫ್ಐಆರ್

About The Author