Thursday, July 24, 2025

Latest Posts

Manglore Hotel : ಉಂಡುಹೋದ ಕೊಂಡುಹೋದ..! ಮಂಗಳೂರಲ್ಲಿ ಹೀಗೊಂದು ಚಾಲಾಕಿ ಕಳ್ಳನ ಕಥೆ…!

- Advertisement -

Manglore News :ಮಂಗಳೂರಿನ ಹೊಟೇಲ್ ವೊಂದರಲ್ಲಿ ಮೊಬೈಲ್ ಕಳ್ಳತನ ನಡೆದಿರುವ ಬಗ್ಗೆ ಮಂಗಳೂರು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಗರದ ಕದ್ರಿ ಪೆಟ್ರೋಲ್ ಪಂಪ್ ನ ಎದುರುಗಡೆ ಇರುವ ಶ್ರೀ ಕಟೀಲ್ ಎಂಬ ಹೊಟೇಲ್ ನಲ್ಲಿ ಅಪರಿಚಿತ ವ್ಯಕ್ತಿಯೋರ್ವ ಈ ಕಳವು ಕೃತ್ಯ ನಡೆಸಿದ್ದಾರೆ ಎಂದು ತಿಳಿದು  ಬಂದಿದೆ.ಈ ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಈ ಬಗ್ಗೆ ಹೋಟೆಲ್ ನ ಮಾಲೀಕರಾದ ಮಹೇಶ್ ಎಸ್. ಅವರು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹೋಟೆಲ್ ನಲ್ಲಿ ಉಂಡು ಬಿಲ್ ಪಾವತಿ ಮಾಡುವಂತಹ ಸಂದರ್ಭದಲ್ಲಿ ಉಂಡು ಹೋದ ಕೊಂಡು ಹೋದ ಎನ್ನುವಂತಹ ರೀತಿಯಲ್ಲಿ ಟೇಬಲ್ ಮೇಲಿದ್ದ ಮೊಬೈಲನ್ನು ಎಗರಿಸಿ ಹೋಗಿದ್ದಾನೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್  ಆಗಿದೆ.

National Highway : ಧಾರಾಕಾರ ಮಳೆಗೆ ಕೊಚ್ಚಿಹೋದ ರಾಷ್ಟ್ರೀಯ ಹೆದ್ದಾರಿ..!

Siddaramaiah: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

Chramudi Ghat: ಚಾರ್ಮುಡಿ ಘಾಟ್ ನಲ್ಲಿ ಗುಡ್ಡ ಕುಸಿತ ವಾಹನ ಸಂಚಾರಕ್ಕೆ ಅಡಚಣೆ

- Advertisement -

Latest Posts

Don't Miss