Monday, August 4, 2025

Latest Posts

ATM : ಎಟಿಎಂ ಗೆ ಜೆಸಿಬಿ ನುಗ್ಗಿಸಿ ದರೋಡೆಗೆ ಯತ್ನ..!

- Advertisement -

Manglore News : ಸುರತ್ಕಲ್‌ ಪೊಲೀಸ್ ಠಾಣಾ‌ವ್ಯಾಪ್ತಿಯಲ್ಲಿ ದರೋಡೆ ಮಾಡುವ ಉದ್ದೇಶದಿಂದ ಎಟಿಎಂಗೆ ಜೆಸಿಬಿ ನುಗ್ಗಿಸಿ ಹಣ ಲಪಟಾಯಿಸಲು ವಿಫಲ ಯತ್ನ ನಡೆಸಿದ ಘಟನೆ ಘಟನೆ ನಡೆದಿದೆ.

ವಿದ್ಯಾದಾಯಿನಿ ಶಾಲೆಯ ಮುಂಭಾಗದ ಜಯಶ್ರೀ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಸೌತ್ ಇಂಡಿಯನ್ ಬ್ಯಾಂಕ್ ಬ್ರಾಂಚ್‌ನ ಎಟಿಎಂ‌ ಮೆಶಿನ್ ಗೆ ಜೆಸಿಬಿ ನುಗ್ಗಿಸುವ ವೇಳೆ ಎಟಿಎಂನ ಗಾಜು ಪುಡಿಯಾಗುತ್ತಿದ್ದಂತೆಯೇ ಎಮರ್ಜೆನ್ಸಿ ಸೈರನ್ ಮೊಳಗಿದ್ದು, ಕಳ್ಳರು ಜೆಸಿಬಿ ಸಹಿತ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಕಳ್ಳರ ಚಲನವಲನ ಎಟಿಎಂ ನ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಪೊಲೀಸರು ಸಿಸಿ ಟಿವಿ ದೃಶ್ಯಗಳನ್ನು ಪಡೆದುಕೊಂಡಿದ್ದಾರೆ. ಸ್ಥಳಕ್ಕೆ ಡಿಸಿಪಿ ದಿನೇಶ್ ಕುಮಾರ್ ಸಹಿತ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿದೆ.

Car : ಕಾರ್ಕಳದಲ್ಲಿ ಕಾರು ಪಲ್ಟಿ : ಚಾಲಕ ಅಪಾಯದಿಂದ ಪಾರು

Fishing : ಬೈಂದೂರು : ಬೃಹತ್ ಅಲೆಗೆ ದೋಣಿ ಪಲ್ಟಿ: ಮೀನುಗಾರರ ರಕ್ಷಣೆ

Sachin Kumar : ರಾಮನಗರ ಜಿಲ್ಲೆ ಹೊರವಲಯದಲ್ಲಿ ಕಚ್ಚಾ ಬಾಂಬ್ ಸ್ಪೋಟ…!

- Advertisement -

Latest Posts

Don't Miss