ಪ್ರೀತಿಸಿ ವಂಚಿಸಿದ ಬಿಜೆಪಿ ಕಾರ್ಯಕರ್ತ..! ಬಲಿಯಾಯ್ತು ಬಡ ಜೀವ..!

State News:

ಬಿಜೆಪಿ ಕಾರ್ಯಕರ್ತನ ವಿರುದ್ದ ಕಿರುಕುಳ ಆರೋಪ ಕೇಳಿ ಬಂದಿದೆ .ಅಪ್ರಾಪ್ತ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುದರೆಮುಖ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ಸಂಬಂಧ ಬಿಜೆಪಿ ಕಾರ್ಯಕರ್ತನ ವಿರುದ್ದ ಕಿರುಕುಳ ಆರೋಪ ಕೇಳಿ ಬಂದಿದೆ.

ಜನವರಿ 10ರಂದು ಕಳಸ ಪಪೂ ಕಾಲೇಜಿನ 17 ವರ್ಷದ ವಿದ್ಯಾರ್ಥಿನಿ ಕೀಟನಾಶಕ ಸೇವಿಸಿದ್ದಳು. ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆಗೆ ಸ್ಪಂದಿಸದ ಶನಿವಾರ ಆಕೆ ಸಾವನ್ನಪ್ಪಿದ್ದಾಳೆ.

ಘಟನೆ ಸಂಬಂಧ ಬಿಜೆಪಿ ಕಾರ್ಯಕರ್ತ ನಿತೇಶ್ (25)​ ವಿರುದ್ದ ಪ್ರೀತಿಸಿ ವಂಚಿಸಿರುವ ಮತ್ತು ಕಿರುಕುಳ ನೀಡುತ್ತಿದ್ದ ಆರೋಪ ಕೇಳಿ ಬಂದಿದೆ. ಆತ್ಮಹತ್ಯೆಗೂ ಮುನ್ನ ಆಕೆ ಡೆತ್‌ನೋಟ್ ಬರೆದಿದ್ದು, ಇದರಲ್ಲಿ ನಿತೇಶ್‌ ಮತ್ತು ತಾನು ಪ್ರೀತಿಸುತ್ತಿದ್ದು, ಇಬ್ಬರ ನಡುವಿನ ಗಲಾಟೆಯಿಂದಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಉಲ್ಲೇಖಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಮೃತ ಯುವತಿ ಪೋಷಕರು ನಿತೇಶ್ ವಿರುದ್ದ ದೂರು ನೀಡಿದ್ದಾರೆ. ಆದರೆ ಕುದುರೆಮುಖ ಪೊಲೀಸರು ದೂರು ದಾಖಲಿಸದೇ ಸತಾಯಿಸುತ್ತಿದ್ದಾರೆಂಬ ಆರೋಪವೂ ಕೇಳಿ ಬಂದಿದೆ ಎನ್ನಲಾಗಿದೆ.

ದೂರು ಸ್ವೀಕರಿಸಲು ಕುದುರೆಮುಖ ಪೊಲೀಸರು ಹಿಂದೇಟು ಹಾಕಿದ್ದು, ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಸೂಚನೆ ಮೇರೆಗೆ ದೂರು ಸ್ವೀಕರಿಸಿದ್ದಾರೆ ಎನ್ನಲಾಗಿದೆ. ಆದರೆ ಆರೋಪಿಯನ್ನು ಈವರೆಗೆ ವಶಕ್ಕೆ ಪಡೆದಿಲ್ಲ ಎಂದು ಪೋಷಕರು ದೂರಿದ್ದಾರೆ ಎಂದು ತಿಳಿದು ಬಂದಿದೆ.

ದುಡಿಮೆಯ ಗುಣ ಬಂಟರ ಏಳಿಗೆಗೆ ಕಾರಣ: ಸಿಎಂ ಬೊಮ್ಮಾಯಿ

ಸಿರ್ಸಿ: ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ,ಶಿಲಾನ್ಯಾಸ ನೆರವೇರಿಸಿದ ಸಿಎಂ ಬೊಮ್ಮಾಯಿ

ಚಿಕ್ಕಬಳ್ಳಾಪುರದಲ್ಲಿಂದು ಆದಿಯೋಗಿ ಪ್ರತಿಮೆ ಉದ್ಘಾಟನೆ

About The Author