Friday, April 18, 2025

Latest Posts

ಮಂಗಳೂರು: ಪರಶುರಾಮನ ಪ್ರತಿಮೆ ನೀಡಿ ಮೋದಿಗೆ ಗೌರವ

- Advertisement -

Manglore News:

ಕಡಲ ನಗರಿ ಮಂಗಳೂರಿನಲ್ಲಿ ಇಂದು ಮೋದಿ ಮೇನಿಯಾ. ಕೂಳೂರಿನಲ್ಲಿರುವ ಗೋಲ್ಡ್ ಫಿಂಚ್  ಮೈದಾನದಲ್ಲಿ ಮೋದಿ  ಆಗಮನದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭ ಆಗಮಿಸಿದ ದೇಶದ ಪ್ರಧಾನಿಗೆ ಮುಖ್ಯಮಂತ್ರಿ  ಬಸವರಾಜ್ ಬೊಮ್ಮಾಯಿ ಆತ್ಮೀಯವಾಗಿ ಸ್ವಾಗತಿಸಿದರು. ನಂತರ ವೇದಿಕೆಗೆ  ಆಗಮಿಸಿದಂತಹ  ಮೋದಿಗೆ ಸನ್ಮಾನ  ಮಾಡಿ  ಗೌರವ ವಂದನೆ ಸಲ್ಲಿಸಲಾಯಿತು. ಈ ವೇಳೆ  ಹೂವಿನ ಹಾರಗಳೊಂದಿಗೆ ಕೃಷ್ಣನ ಮೂರುತಿ ಪ್ರತಿಬಿಂಬದ ಜೊತೆ ಪರಶುರಾಮನ ಪ್ರತಿಮೆಯನ್ನು  ಮೋದಿಗೆ ನೆನಪಿನ   ಕಾಣಿಕೆಯಾಗಿ  ನೀಡಲಾಯಿತು.

ತುಳುನಾಡಿನ ಜನತೆಗೆ ಪರಶುರಾಮ ಮಹಾನ್ ಪೂಜಿತ  ವ್ಯಕ್ತಿತ್ವ ಆದುದರಿಂದ ಬಹಳ ಹಿಂದೆಯೇ ಮೋದಿಗೆ ಪರಶುರಾಮ ವಿಗ್ರಹ ನೀಡುವ ಬಗ್ಗೆ ಚರ್ಚಿಸಲಾಗಿತ್ತು. ಶಾಸಕ  ಸಚಿವರೆಲ್ಲರು  ನಿರ್ಧರಿಸಿದ ನಂತರ ನರೇಂದ್ರ ಮೋದಿಗೆ ಪರಶುರಾಮನ ಪ್ರತಿಮೆ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಹಾಗೆಯೆ ಮೋದಿಗೆ  ಸನ್ಮಾನಿಸುವ ಸಂದರ್ಭದಲ್ಲಿ ಈ  ಪರಶುರಾಮನ ಪ್ರತಿಮೆಯನ್ನು ಮಂಗಳೂರು ಸಮಾವೇಶದ ನೆನಪಿಗಾಗಿ ನೀಡಲಾಯಿತು.

ಮಂಗಳೂರು: ಮೋದಿ ಆಗಮನ ಹಿನ್ನಲೆ ಬದಲಾದ ಸಂಚಾರ ವ್ಯವಸ್ಥೆ,ಪರದಾಡಿದ ಜನಸಾಮಾನ್ಯರು

ಮಂಗಳೂರಿನಲ್ಲಿ ಮೋದಿ ಮೇನಿಯಾ…!

ಮಂಗಳೂರಿಗೆ ಬಂದಿಳಿದ ಪ್ರಧಾನಿ ಮೋದಿ

- Advertisement -

Latest Posts

Don't Miss