Manglore News:
ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಕಾರ್ಯಕ್ರಮದ ಸಿದ್ದತೆ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಭದ್ರತೆಯ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರಧಾನಿ ಭಾಗವಹಿಸುವ ಕಾರ್ಯಕ್ರಮದಲ್ಲಿ ಕಪ್ಪುಬಟ್ಟೆ ಧರಿಸುವಂತಿಲ್ಲ. ಕಪ್ಪು ಬಟ್ಟೆ ಕೊಂಡೊಯ್ಯುವಂತಿಲ್ಲ ಎನ್ನುವ ಸ್ಪಷ್ಟ ಸೂಚನೆಯನ್ನು ಎಡಿಜಿಪಿ ಅಲೋಕ್ ಕುಮಾರ್ ನೀಡಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಮಂಗಳೂರಿಗೆ ಪ್ರಧಾನಿಯವರು ಆಗಮಿಸುತ್ತಾರೆ. ಮತ್ತೆ ಸಂಜೆ 4.30ಕ್ಕೆ ಮಂಗಳೂರು ಏರ್ ಪೋರ್ಟ್ ನಿಂದ ತೆರಳುತ್ತಾರೆ. ಭದ್ರತೆಗಾಗಿ ಹೊರಗಿನ ಜಿಲ್ಲೆಗಳಿಂದ ಪೊಲೀಸರು ಆಗಮಿಸಿದ್ದಾರೆ. ಸಾರ್ವಜನಿಕರು ಆಗಮಿಸುವಾಗ ಯಾವುದೇ ಲೈಟರ್, ಬೆಂಕಿ ಪೊಟ್ಟಣ, ಕಪ್ಪು ಬಟ್ಟೆ, ಬಾಟಲ್, ಯಾವುದೇ ಕರಪತ್ರವನ್ನು ತರಬಾರದು. ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಆಗಮಿಸುವವರು ಕಪ್ಪು ಬಟ್ಟೆ ಧರಿಸುವಂತಿಲ್ಲ ಎಂದು ಮಂಗಳೂರಿನಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಸೂಚನೆ ನೀಡಿದ್ದಾರೆ ಎಂದು ತಿಳಿದಿದೆ.
ಮೋದಿ ಮಂಗಳೂರಿಗೆ ಭೇಟಿ ಹಿನ್ನಲೆ ಕನ್ನಡ,ಮಲಯಾಳಂನಲ್ಲಿ ಪ್ರಧಾನಿ ಟ್ವೀಟ್ …!