Monday, April 14, 2025

Latest Posts

ಮಂಗಳೂರಿನಲ್ಲಿ ಎಂ.ಎಸ್ ಧೋನಿ..?! ಆಗಮನದ ಕಾರಣವೇನು ಗೊತ್ತಾ..?!

- Advertisement -

Manglore News:

ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಜನವರಿ 7 ರಂದು ಭಾರತದ ಕ್ರಿಕೆಟ್ ಟೀಂ ನ ಮಾಜಿ ಕ್ಯಾಪ್ಟನ್ ಎಂ ಎಸ್ ಧೋನಿ ಬಂದಿಳಿದಿದ್ದಾರೆ. ಕಾಸರಗೋಡಿನಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಭಾರತ ತಂಡದ ಮಾಜಿ ಕಪ್ತಾನ್‌ ಎಂ.ಎಸ್. ಧೋನಿ ಅವರು ಮುಂಬೈಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ಆಗಮಿಸಿದರು.
ವಿಮಾನ ನಿಲ್ದಾಣಕ್ಕೆ ಬಂದಿಳಿದ ಧೋನಿ ಅವರನ್ನು ಶಾಸಕ ಯು.ಟಿ. ಖಾದರ್ ಅವರ ಸಹೋದರ ಯು.ಟಿ. ಇಫ್ತಿಕಾರ್ ಆತ್ಮೀಯವಾಗಿ ಸ್ವಾಗತಿಸಿದರು. ಇನ್ನು ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದು, ಧೋನಿಯವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿ ಬಿದ್ದರು. ಸ್ನೇಹಿತ ಡಾ.ಶಾಜೀರ್ ಗಫಾರ್ ಅವರ ತಂದೆ ಪ್ರೊ.ಕೆ ಕೆ ಅಬ್ದುಲ್ ಗಫಾರ್ ಅವರ ಆತ್ಮಕಥನ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ಕಾಸರಗೋಡಿಗೆ ತೆರಳಲು ಧೋನಿ ಆಗಮಿಸಿದ್ದಾರೆ. ಇಂದು ಸಂಜೆ ಕಾಸರಗೋಡಿನ ಬೇಕಲ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ.

ಮಂಡ್ಯ: ಜಿಲ್ಲಾ ಉಸ್ತುವಾರಿ ಸಚಿವರಿಂದ ಬಗರ್ ಹುಕ್ಕುಂ ಸಾಗುವಳಿ ಪತ್ರ ವಿತರಣೆ

ಹಾಸನ: ಮಿಕ್ಸಿ ಸ್ಫೋಟದ ಪ್ರಮುಖ ಆರೋಪಿ ಕೋರ್ಟ್ ಗೆ ಹಾಜರ್

ಜ.15 ರಂದು ಯೋಗಾಥಾನ್ ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಳ್ಳಿ: ಡಾ: ಹೆಚ್.ಎನ್ ಗೋಪಾಲಕೃಷ್ಣ

- Advertisement -

Latest Posts

Don't Miss