- Advertisement -
Manglore News: ಕರಾವಳಿಯಲ್ಲಿ ಭೋರ್ಗರೆಯುತ್ತಿರುವ ಮಳೆಗೆ ದಿನದಿಂದ ದಿನಕ್ಕೆ ಸಮಸ್ಯೆಗಳು ತಲೆದೋರುತ್ತಿವೆ. ಮಂಗಳೂರು ಪುತ್ತೂರಿನಲ್ಲಿ ಧಾರಾಕಾರ ಮಳೆಯಿಂದ ಮನೆಯೊಂದು ಹಾನಿಗೊಳಗಾಗಿದೆ. ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಕನ್ನಡ್ಕ ಎಂಬಲ್ಲಿ ಗುಡ್ಡ ಜರಿದು ಮನೆಗೆ ಹಾನಿ ಸಂಭವಿಸಿದ್ದು ಮನೆಯಲ್ಲಿದ್ದವರು ಅಪಾಯದಿಂದ ಪಾರಾದ ಘಟನೆ ನಡೆದಿದೆ.
ರಾಘವ ಗೌಡ ಎಂಬುವರ ಮನೆ ಇದಾಗಿದ್ದು ಗುಡ್ಡ ಜರಿದು ಮನೆಯ ಹಿಂಬಾಗಕ್ಕೆ ಹಾನಿಯಾಗಿದೆ. ಮನೆಯಲ್ಲಿದ್ದ ರಾಘವ ಗೌಡ ಪತ್ನಿ ಮಕ್ಕಳಿಗೆ ಯಾವುದೇ ಹಾನಿ ಸಂಭವಿಸಿಲ್ಲ.
ಸ್ಥಳಕ್ಕೆ ಕಂದಾಯ ಅಧಿಕಾರಿ ಮಂಜುನಾಥ್ ಸಹಾಯಕ ರಘುನಾಥ್ ಸ್ಥಳೀಯರು ಆಗಮಿಸಿದ್ದಾರೆ. ಪರಿಹಾರದ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಸರ್ಕಾರದ ಆದೇಶಕ್ಕೂ ಕಿಮ್ಮತ್ತು ನೀಡಲು ಮರೆತರಾ ಪಾಲಿಕೆಯ ಅಧಿಕಾರಿಗಳು..?!
- Advertisement -