Saturday, April 19, 2025

Latest Posts

Thunder : ಮಂಗಳೂರು : ಸಿಡಿಲು ಬಡಿದು ಅಂಗಡಿ ಧ್ವಂಸ

- Advertisement -

Manglore News: ಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೀಟರ್ ಅಪೋಸ್ ಮಾಲಕತ್ವದ ರಾಣಿಪುರ ಸ್ಟೋರ್ ನಿನ್ನೆ ರಾತ್ರಿ ಸುರಿದ ಗುಡುಗು ಸಹಿತ ಮಳೆಗೆ ಅಂಗಡಿ ಸಂಪೂರ್ಣ ಭಸ್ಮವಾಗಿದೆ. ಅಂಗಡಿಯಲ್ಲಿರುವ ದಿನಸಿ ಸಾಮಾಗ್ರಿ, 3ಫ್ರಿಡ್ಜ್, ಹಾಗೂ ಕಟ್ಟಡ ಸೇರಿ ಸುಮಾರು 20 ಲಕ್ಷಕ್ಕಿಂತಲೂಅಧಿಕ ನಷ್ಟವಾಗಿದೆ,.  ಬೆಂಕಿಯ ತಾಪಕ್ಕೆ ಹಿಂದುಗಡೆಯಲ್ಲಿರುವ ಮನೆಗೆ ಹಾನಿಯಾಗಿದ್ದು, ಮನೆಯು ಸೋರುತ್ತಿದೆ.

ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್ ಕೇಂದ್ರೀಯ ಅಧ್ಯಕ್ಷ ಅಲ್ವಿನ್ ಡಿಸೋಜ, ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಲ್ಫರೆಡ್ ಡಿಸೋಜ, ರಾಣಿಪುರ ಚರ್ಚ್  ಪಾಲನಾಮಂಡಳಿಯ ಉಪಾಧ್ಯಕ್ಷ ಅರುಣ್ ಮೊಂತೆರೋ ಮಾತನಾಡಿ ಪ್ರಕೃತಿ ವಿಕೋಪದಿಂದ ಹಾನಿಯಾದ ಇವರಿಗೆ ಸರಕಾರದಿಂದ ಹೆಚ್ಚಿನ ಪರಿಹಾರ ಸಿಗಲಿ ಎಂದು ಹೇಳಿದರು.

ತಹಶಿಲ್ದಾರ್  ಪ್ರಭಾಕರ್ ಕಜೂರು ಸ್ಥಳಕ್ಕೆ ಬೇಟಿ ನೀಡಿ ಸರಕಾರದಿಂದ ಸಿಗುವ ಪರಿಹಾರಕ್ಕಾಗಿ 100% ಪ್ರಯತ್ನ ಮಾಡುತ್ತೇನೆಂದು ಹೇಳಿದರು. ಮ್ಯಾಕ್ಸಿಮ್ ಡಿಸೋಜ, ಪ.ಸದಸ್ಯರಾದ ಹಸನಬ್ಬ,ನವೀನ್ ಡಿಸೋಜ, ಬಾಬು ಶೆಟ್ಟಿ, ಪುಷ್ಪಲತಾ ಅಂಚನ್ ಉಪಸ್ಥಿತರಿದ್ದರು.

ಗ್ರಾಮ ಕರಣಿಕ ರೇಷ್ಮಾ ಕಂದಾಯ ಅಧಿಕಾರಿ ಮಂಜುನಾಥ್, ಪ,ಅಭಿವೃದ್ದಿ ಅಧಿಕಾರಿ ರವೀಂದ್ರ ರಾಜೀವ ನಾಯಕ್ ಸ್ಥಳಕ್ಕೆ ಭೇಟಿ ನೀಡಿದರು.

Alcohol lovers : ಉಚಿತ ಮದ್ಯ ಕೊಡಿ ಇಲ್ಲ ಮದ್ಯ ಬ್ಯಾನ್ ಮಾಡಿ…! ಮದ್ಯಪ್ರಿಯರ ವಿಭಿನ್ನ ಪ್ರತಿಭಟನೆ..!

Ambulance : ಆ್ಯಂಬುಲೆನ್ಸ್ ನಲ್ಲಿಯೇ ಹೆರಿಗೆ..!

Ashwath Narayan : ವೇಣುಗೋಪಾಲ್ ಹತ್ಯೆಗೆ  ಸರ್ಕಾರವೇ ನೇರ ಹೊಣೆ : ಅಶ್ವತ್ಥ್ ನಾರಾಯಣ್

 

- Advertisement -

Latest Posts

Don't Miss