Transgender : ಮಂಗಳಮುಖಿಯರಿಂದ ಸಾರ್ವಜನಿಕರಿಗೆ ಕಿರುಕುಳ : ಪ್ರಕರಣ ದಾಖಲು

Manglore News : ಮಂಗಳೂರಿನಲ್ಲಿ ನಿನ್ನೆ ಜು.29 ತಡರಾತ್ರಿ ಮಂಗಳಮುಖಿಯರು ಸಾರ್ವಜನಿಕರಿಗೆ ಕಿರಿಕಿರಿ ನೀಡಿದ್ದಾರೆಂದು ಆರೋಪ ಕೇಳಿಬಂದಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು 10 ಕ್ಕೂ ಹೆಚ್ಚು ಮಂಗಳ ಮುಖಿಯರನ್ನು ವಶಕ್ಕೆ ಪಡೆದಿದ್ದಾರೆ.

ಮಂಗಳೂರುಊರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿನ್ನೆ ರಾತ್ರಿ ಮಂಗಳೂರು ನಗರದ ಆಸ್ಪತ್ರೆಯೊಂದರ ಬಳಿ ದಾರಿಯಲ್ಲಿ ಹೋಗುವವರ ಜೊತೆ ಅಸಭ್ಯ ವರ್ತನೆ ತೋರಿದ್ದು, ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಇನ್ಸ್ಪೆಕ್ಟರ್ ಭಾರತಿಯವರ ಜೊತೆ ಮಂಗಳಮುಖಿಯರು ವಾಗ್ವಾದ ನಡೆಸಿದ್ದಾರೆ.ಘಟನೆ ಹಿನ್ನೆಲೆ ಇದೀಗ ಹತ್ತಕ್ಕೂ ಹೆಚ್ಚು ಮಂಗಳಮುಖಿಯರನ್ನು ವಶಕ್ಕೆ ಪಡೆದಿದ್ದು, ಸಾರ್ವಜನಿಕ ಶಾಂತಿ ಭಂಗದ ಅಡಿಯಲ್ಲಿ ಕೇಸು ದಾಖಲಾಗಿದೆ.

Tomato : ಟೊಮೆಟೊ ತುಂಬಿದ ಲಾರಿ ನಾಪತ್ತೆ…!

Falls : ಕಣ್ತುಂಬಿಕೊಳ್ಳಬೇಕಿದೆ ಬೈರಪ್ಪನ ಕೊಳ್ಳದ ಸೊಬಗು…!

Falls : ಅವಳಿ ನಗರದಲ್ಲಿ ಹರಿಯುವ ನೀರಿನಲ್ಲಿ ಜನರ ಸೆಲ್ಫಿ ಹುಚ್ಚಾಟ…!

About The Author