Sunday, October 5, 2025

Latest Posts

ಮಣಿಪಾಲ್ ಸಮೂಹಕ್ಕೆ ಐಟಿ ಶಾಕ್..!

- Advertisement -

Banglore News:

ಬೆಂಗಳೂರಿನ ಮಣಿಪಾಲ್ ಸಮೂಹಕ್ಕೆ ಬೆಳ್ಳಂಬೆಳಗ್ಗೆ  ಐಟಿ ಶಾಕ್  ನೀಡಿದೆ. ಮಣಿಪಾಲ್ ಸಂಸ್ಥೆಗಳ ಮೇಲೆ ಏಕಕಾಲಕ್ಕೆ ಐಟಿ ಅಧಿಕಾರಿಗಳು ದಾಳಿಯನ್ನು ನಡೆಸಿದ್ದಾರೆ.

ನಾಲ್ಕು ಇನ್ನೋವಾ ವಾಹನದಲ್ಲಿ ಅಧಿಕಾರಿಗಳು ಹೈಗ್ರೌಂಡ್ಸ್ ಪೊಲೀಸ್ ಠಾಣೆ ಬಳಿ ಇರುವ ಮಣಿಪಾಲ್ ಆಸ್ಪತ್ರೆಗೆ ದಾಳಿ ನಡೆಸಿದ್ದಾರೆ. ಬೆಳಗಿನ ಜಾವ 6 ಗಂಟೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ದಾಳಿ ನಡೆಸಿದ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

200 ಕ್ಕೂ ಹೆಚ್ಚು ಐಟಿ ಅಧಿಕಾರಿಗಳಿಂದ ಒಟ್ಟು 20 ಕಡೆಗಳಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.  ಇದೀಗ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಓಲ್ಡ್ ಏರ್‌ ಪೋರ್ಟ್ ರೋಡ್, ಕನ್ನಿಂಗ್ ಹ್ಯಾಮ್ ರೋಡ್, ಯಶವಂತಪುರ, ಏರ್‌ ಪೋರ್ಟ್ ರೋಡ್ ಸೇರಿದಂತೆ 20 ಕಡೆ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಐಟಿ ಅಧಿಕಾರಿಗಳು ಬೆಳಗ್ಗೆಯಿಂದ ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂದು  ತಿಳಿದು ಬಂದಿದೆ.

ಮುಂದಿನ ಮೂರು ಗಂಟೆ ಬೆಂಗಳೂರಿನಲ್ಲಿ ಮಹಾ ಮಳೆ..!

ಉಮೇಶ್ ಕತ್ತಿ ನಿಧನ ಹಿನ್ನಲೆ ಬಿಜೆಪಿ ಸಮಾವೇಶ ಮುಂದೂಡಿಕೆ

ಉಮೇಶ್ ಕತ್ತಿ ನಿಧನಕ್ಕೆ ಮೋದಿ ಸಂತಾಪ

- Advertisement -

Latest Posts

Don't Miss