Rules : ಮಣಿಪಾಲದಲ್ಲಿ ವಾರಾಂತ್ಯ ಪಬ್, ಕ್ಲಬ್ ಗಳಿಗೆ ಕಟ್ಟುನಿಟ್ಟಿನ ಕ್ರಮ ಜಾರಿ

Manipal News : ವಾರಾಂತ್ಯ ಅಂದರೆ ಆಗಸ್ಟ್ 12 ರಂದು ಮಣಿಪಾಲ ಪೊಲೀಸರು ಯಾವುದೇ ರೀತಿಯ ಡಿಜೆ ಸಂಗೀತ, ಧ್ವನಿ ವ್ಯವಸ್ಥೆಗಳನ್ನು ಬಳಸದಂತೆ ಎಲ್ಲಾ ಪಬ್, ಕ್ಲಬ್ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಬಕಾರಿ ಇಲಾಖೆಯೂ ಇದೇ ಆದೇಶ ಹೊರಡಿಸಿದೆ.

ಮಣಿಪಾಲದಲ್ಲಿ ವಾರಾಂತ್ಯದ ಡಿಜೆ ರಾತ್ರಿ ಪಾರ್ಟಿಗಳು ನಡೆಯುತ್ತಿದ್ದ ಕಾರಣ ಮಣಿಪಾಲ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ. ಪೊಲೀಸ್ ಇಲಾಖೆ ಮತ್ತು ಅಬಕಾರಿ ಇಲಾಖೆಯ ಆದೇಶದ ಮೇರೆಗೆ ಎಲ್ಲಾ ಪಬ್ ಮಾಲೀಕರು ಮೊದಲೇ ಬುಕ್ ಮಾಡಿದ ಡಿಜೆ ಮ್ಯೂಸಿಕ್ ಪಾರ್ಟಿಗಳನ್ನು ರದ್ದುಗೊಳಿಸಿದ್ದಾರೆ. ಪಬ್‌ಗಳು ಕೇವಲ ಆಹಾರ ಸೇವನೆಯ ಉದ್ದೇಶಕ್ಕಾಗಿ ಮಾತ್ರ ತೆರೆದಿದ್ದವು ಎನ್ನಲಾಗಿದೆ.

ಮಣಿಪಾಲದಲ್ಲಿ ಕಟ್ಟುನಿಟ್ಟಿನ ಕ್ರಮದ ಹಿನ್ನಲೆಯಲ್ಲಿ ಹೆಚ್ಚುವರಿ ಕೆಎಸ್‌ಆರ್‌ಪಿ ಪಡೆಯನ್ನೂ ಹಾಕಲಾಗಿತ್ತು. ಮೂರು ಚೆಕ್‌ಪೋಸ್ಟ್‌ಗಳನ್ನು ಪೊಲೀಸರು ಸ್ಥಾಪಿಸಿದ್ದು, ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ವ್ಯಾಪ್ತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

Cow : ಕೆಸರಿನಲ್ಲಿ ಹೂತುಹೋಗಿದ್ದ ಹಸುವನ್ನು ರಕ್ಷಿಸಿದ ಬೈಕ್ ಸವಾರರು..!

Congress Leader : ಕಾಂಗ್ರೆಸ್ ಮುಖಂಡನ ಸಾವು, ಹತ್ಯೆ ಶಂಕೆ..?!

Digital India : ಡಿಜಿಟಲ್ ಸುರಕ್ಷತೆಯೆಡೆಗೆ ವೈಯುಕ್ತಿಕ ದತ್ತಾಂಶ ಸುರಕ್ಷತಾ ಕಾನೂನು : ಸಂಸದ ತೇಜಸ್ವೀ ಸೂರ್ಯ

About The Author