ಬೆಂಗಳೂರು : ಹಲವು ಸರ್ಕಾರಿ ಅಧಿಕಾರಿಗಳ ವಿರುದ್ಧ, ಅಕ್ರಮ ಆರೋಪ ಕೇಳಿ ಬರ್ತಿತ್ತು. ಹೀಗಾಗಿ ಫೀಲ್ಡಿಗಿಳಿದ ಲೋಕಾಯುಕ್ತ ಟೀಂ, ಭ್ರಷ್ಟ ಕೋಟಿ ಕುಳಗಳ ಮನೆಗೆ ಎಂಟ್ರಿ ಕೊಟ್ಟಿತ್ತು. ಪರಿಶೀಲನೆಗಿಳಿದ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದು, ಕೈ ಇಟ್ಟಲೆಲ್ಲಾ ಕಂತೆ ಕಂತೆ ಹಣ ಪತ್ತೆಯಾಗಿದೆ.
ಕೊಪ್ಪಳ ಡಿಸ್ಟ್ರಿಕ್ಟ್ ಇಂಡಸ್ಟ್ರಿಯಲ್ ಅಂಡ್ ಕಮರ್ಷಿಯಲ್ ಟ್ಯಾಕ್ಸ್ ಉಪ ನಿರ್ದೇಶಕ ಎಸ್ .ಎಂ.ಚವ್ಹಾಣ. ಹುಬ್ಬಳ್ಳಿಯ ವಿದ್ಯಾನಗರದ ದತ್ತಾನಗರದಲ್ಲಿ ಮನೆ ಇದೆ. ಹೊರಗಿನಿಂದ ನೋಡೋಕ್ಕೆ ಸಾಧಾರಣವಾಗಿ ಕಂಡು ಬರ್ತಿದ್ರೂ, ಮನೆಯೊಳಗೆ ಕಾಲಿಟ್ಟ ಲೋಕಾಯುಕ್ತ ಅಧಿಕಾರಿಗಳೇ ಬೆಚ್ಚಿಬಿದ್ದಿದ್ರು.
ಇದನ್ನೂ ಓದಿ : ಸಿದ್ದು ಅನುಕರಣೆ : ತವರಿನಲ್ಲಿ ಸಿಎಂ ಆಸೆ ಹೊರಹಾಕಿದ ಡಿಕೆಶಿ
ಇನ್ನು, ವಿವಿಧ ಕಡೆ 12 ಸೈಟ್, ಕೊಪ್ಪಳದಲ್ಲಿ 2 ಮನೆ, ಹುಬ್ಬಳ್ಳಿಯಲ್ಲಿ 1 ಮನೆ, ಆರೂವರೆ ಎಕರೆ ಜಮೀನಿನ ದಾಖಲೆಗಳೂ ಲಭ್ಯವಾಗಿವೆ. ಈ ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳು ಕ್ರಾಸ್ ಚೆಕ್ ಮಾಡ್ತಿದ್ದಾರೆ. ಮತ್ತು ಸೀಜ್ ಮಾಡಿದ ಹಣ ತೆಗೆದುಕೊಂಡು ಹೋಗಲು ಟ್ರಂಕನ್ನೂ ತರಲಾಗಿದೆ.
ಒಟ್ನಲ್ಲಿ ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪ ಹೊತ್ತ, ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಟೀಂ ಬೆವರಿಳಿಸಿದೆ. ನಾಳೆಯೂ ಕೂಡ ಪರಿಶೀಲನೆ ಮುಂದುವರೆಯಲಿದೆ.