Friday, October 18, 2024

Latest Posts

ಸನ್ನೆ ಮಾಡಿ ವಿವಾದ ಸೃಷ್ಟಿಸಿದ ಮಾರ್ಕಸ್ ಸ್ಟೋಯ್ನಿಸ್: ಪಾಕ್ ವೇಗಿ ವಿರುದ್ಧ ಆಕ್ರೋಶ 

- Advertisement -

ಲಂಡನ್: ಪಾಕ್ ವೇಗಿ ಮೊಹ್ಮದ್ ಹಸ್ನೈನ್ ವಿರುದ್ಧ ಆಸ್ಟ್ರೇಲಿಯಾ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಸನ್ನೆ ಮಾಡಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಹಂಡ್ರೆಡ್ ಟೂರ್ನಿಯಲ್ಲಿ  ಸದರ್ನ್ ಬ್ರೇವ್ ತಂಡದ ಪರ ಆಡುತ್ತಿರುವ ಮಾರ್ಕಸ್ ಸ್ಟೋಯ್ನಿಸ್ 37 ರನ್‍ಗಳಿಸಿದ್ದಾಗ ಒವೆಲ್ ತಂಡದ ವೇಗಿ ಮೊಹ್ಮದ್ ಹಸ್ನೈನ್ ಎಸೆತದಲ್ಲಿ  ಮಿಡ್ ಆïನಲ್ಲಿ ವಿಲ್ ಜಾಕ್ಸ್‍ಗೆ ಕ್ಯಚ್ ನೀಡಿದರು.

ಪೆವಿಲಿಯನ್‍ಗೆ  ಹೋಗುವ ವೇಳೆ ಸ್ಟೋಯ್ನಿಸ್ ವೇಗಿ ಮೊಹ್ಮದ್ ಹಸ್ನೈನ್ ಅವರ ಬೌಲಿಂಗ್ ಶೈಲಿಯನ್ನು ಬಿಂಬಿಸುವಂತೆ ಸನ್ನೆ ಮಾಡುವ ಮೂಲಕ ತಮ್ಮ ಸಿಟ್ಟನ್ನು ಹೊರ ಹಾಕಿ ವಿವಾದ ಸೃಷ್ಟಿಸಿದರು.

ಈ ಪ್ರಕರಣಕ್ಕೆ ಸಂಬಂಸಿದಂತೆ ಮ್ಯಾಚ್ ರೆಫರಿಯನ್ನು `ಭೇಟಿ ಮಾಡಿ ಮಾತುಕತೆ ನಡೆಸಿದ್ದು ಯಾವುದೇ ತಪ್ಪುಗಳು ಆಗಿಲ್ಲ ಎಂದು ತಿಳಿದು ಬಂದಿದೆ.

ಆಲ್ರೌಂಡರ್ ಸ್ಟೋಯ್ನಿಸ್ ಈ ರೀತಿ ಮಾಡುತ್ತಿರುವುದು ಇದೆ ಮೊದಲಲ್ಲ. ಈ ಹಿಂದೆ ಬಿಗ್ ಬ್ಯಾಶ್ ಲೀಗ್‍ನಲ್ಲೂ ಹೀಗೆ ಮಾಡಿದ್ದರು ಎಂದು ತಿಳಿದು ಬಂದಿದೆ.

ಕಳೆದ ವರ್ಷ ಹಸ್ನೈನ್ ಅನುಮಾನಸ್ಪಾದ ಬೌಲಿಂಗ್ ಮಾಡಿ ಅಮಾನತು ಶಿಕ್ಷೆಗೆ ಗುರಿಯಾಗಿದ್ದರು.

- Advertisement -

Latest Posts

Don't Miss