Saturday, April 19, 2025

Latest Posts

Mark Rutte : ಜನರೊಂದಿಗೆ ಸರಳವಾಗಿ ಬೆರೆತ ನೆದರ್‌ಲ್ಯಾಂಡ್ಸ್ ಪ್ರಧಾನಿ : ಸಾರ್ವಜನಿಕರೊಂದಿಗೆ ಸೆಲ್ಫಿ

- Advertisement -

Banglore News : ಎರಡು ದಿನಗಳ ಬೆಂಗಳೂರು ಪ್ರವಾಸ ಕೈಗೊಂಡಿರುವ ನೆದರ್‌ಲ್ಯಾಂಡ್ಸ್ ದೇಶದ ಪ್ರಧಾನಿ ಮಾರ್ಕ್ ರುಟ್ಟೆ ಅವರು , ಭಾರತ ಹಾಗೂ ನೆದರ್‌ಲ್ಯಾಂಡ್ಸ್ ರಾಷ್ಟ್ರಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ತೆರೆದುಕೊಂಡು 75 ವರ್ಷಗಳಾಗಿರುವ ಸಂದರ್ಭದ ಸವಿನೆನಪಿಗಾಗಿ ನಗರದ ಚರ್ಚ್ ಸ್ಟ್ರೀಟ್‌ನಲ್ಲಿ ಇಂದು ಸಂಚರಿಸಿದರು.

ಸರಳ ಭದ್ರತೆಯ ನಡುವೆ ಯಾವುದೇ ಹೆಚ್ಚು ಅಂತರಗಳನ್ನಿಟ್ಟುಕೊಳ್ಳದೇ ಸಾರ್ವಜನಿಕರು ಹಾಗೂ ಮಾಧ್ಯಮದವರೊಂದಿಗೆ ಬೆರೆತ ನೆದರ್‌ಲ್ಯಾಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ ಅವರು, ಜನರ ಬಳಿ ತೆರಳಿ ಕೈ ಕುಲುಕಿದರು.

ಚಿಕ್ಕ ಮಗುವೊಂದನ್ನು ಕಂಡು ಖುಷಿಯಾದ ಅವರು ಮಗುವಿನತ್ತ ವಿಶೇಷ ಪ್ರೀತಿ ಸೂಚಿಸಿದರು.ತಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬಂದ ಸಾರ್ವಜನಿಕರೊಂದಿಗೆ ಬೆರೆತು ತಾವೇ ಖುದ್ದಾಗಿ ಜನರ ಮೊಬೈಲುಗಳಲ್ಲಿ ಸೆಲ್ಫಿ ತೆಗೆದುಕೊಟ್ಟರು. ಶಾಸಕ ಎನ್. ಎ.ಹ್ಯಾರಿಸ್ ಮತ್ತಿತರ ಗಣ್ಯರು ಜೊತೆಗಿದ್ದರು.

Mark Rutte : ಅಭಿವೃದ್ಧಿಶೀಲ ರಾಷ್ಟ್ರಗಳ ಸಾಲ ಯೋಜನೆ ಕುರಿತು ಸೂಕ್ತ ವೇದಿಕೆಗಳಲ್ಲಿ ಚರ್ಚೆ : ಪ್ರಧಾನಿ ಮಾರ್ಕ್ ರುಟ್ಟೆ

Mark Rutte : ಚರ್ಚ್ ಸ್ಟ್ರೀಟ್‌ನಲ್ಲಿ ಚಹಾ ಸವಿದ ನೆದರ್‌ಲ್ಯಾಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ

Prajwal Revanna : ಸಂಸದ ಪ್ರಜ್ವಲ್ ರೇವಣ್ಣ ಆಯ್ಕೆ ಅಸಿಂಧು ಆದೇಶ ಅಮಾನತು ಅರ್ಜಿ ವಜಾಗೊಳಿಸಿದ ಹೈಕೋರ್ಟ್

- Advertisement -

Latest Posts

Don't Miss