Banglore News : ಎರಡು ದಿನಗಳ ಬೆಂಗಳೂರು ಪ್ರವಾಸ ಕೈಗೊಂಡಿರುವ ನೆದರ್‌ಲ್ಯಾಂಡ್ಸ್ ದೇಶದ ಪ್ರಧಾನಿ ಮಾರ್ಕ್ ರುಟ್ಟೆ ಅವರು , ಭಾರತ ಹಾಗೂ ನೆದರ್‌ಲ್ಯಾಂಡ್ಸ್ ರಾಷ್ಟ್ರಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ತೆರೆದುಕೊಂಡು 75 ವರ್ಷಗಳಾಗಿರುವ ಸಂದರ್ಭದ ಸವಿನೆನಪಿಗಾಗಿ ನಗರದ ಚರ್ಚ್ ಸ್ಟ್ರೀಟ್‌ನಲ್ಲಿ ಇಂದು ಸಂಚರಿಸಿ ,ಚಹಾ ಸವಿದರು.
ಬ್ರಿಗೇಡ್ ರಸ್ತೆಯಿಂದ ಕಾಲ್ನಡಿಗೆ ಮೂಲಕ ಚರ್ಚ್ ಸ್ಟ್ರೀಟಿನ ಚಾಯ್‌ಪಾಯಿಂಟ್‌ಗೆ ಆಗಮಿಸಿ, ಮಸಾಲಾ ಚಹ ಖರೀದಿಸಿ ಸವಿದು,ಯುಪಿಐ ಮೂಲಕ ಹಣ ಪಾವತಿ ಮಾಡಿದರು.
ಬಳಿಕ ತಮ್ಮ ಸಂಗಡಿಗರೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತ ಚರ್ಚ್ ಸ್ಟ್ರೀಟಿನ ಬೇರಿ ಸರ್ಕಲ್‌ವರೆಗೆ ಕಾಲ್ನಡಿಗೆಯಲ್ಲಿಯೇ ಬಂದರು. ತಕ್ಷಶಿಲಾ ಇನ್‌ಸ್ಟಿಟ್ಯೂಷನ್ ಗೋಡೆಯ ಮೇಲೆ ಭಾರತ ಹಾಗೂ ನೆದರ್‌ಲ್ಯಾಂಡ್ಸ್ ದ್ಯೋತಕವಾಗಿ ಬರೆಯಲಾಗಿರುವ ಸಿಂಹ( Mural)ದ ವರ್ಣಚಿತ್ರ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.
Bharatha: “ಇಂಡಿಯಾ” ಹೆಸರಿನಿಂದ ಬಿಜೆಪಿಯವರು ಹೆದರಿದ್ದಾರೆ ; ಶೆಟ್ಟರ್..!
Kaveri water: ಘಟಬಂಧನ ಉಳಿಸಲು ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ..!ಪ್ರಹ್ಲಾದ್ ಜೋಶಿ
Law: ಒಂದು ರಾಷ್ಟ್ರ, ಒಂದು ಕಾನೂನಿನಲ್ಲಿ ಸಾಕಷ್ಟು ಅನುಮಾನ- ಕಾನೂನು ಸಚಿವ ಎಚ್ ಕೆ ಪಾಟೀಲ್