www.karnatakatv.net :ಪ್ರಚಾರಕ್ಕಾಗಿ ಜನರು ಏನ್ ಬೇಕಾದ್ರೂ ಮಾಡೊದಕ್ಕೆ ರೆಡಿ ಇರುತ್ತಾರೆ ಅನ್ನೋದ್ದಕ್ಕೆ ಬೆಸ್ಟ್ ಎಕ್ಸಾಂಪಲ್ ಇಲ್ಲಿದೆ ನೋಡಿ. ನೀವು ನಂಬುತ್ತಿರೋ ಬಿಡ್ತಿರೋ ಗೊತ್ತಿಲ್ಲ.. ಇಲ್ಲೊಬ್ಬ ಭೂಪ ರೈಸ್ ಕುಕ್ಕರ್ ನ್ನು ಮದುವೆಯಾಗೊ ಮೂಲಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾನೆ.
ಜನಪ್ರಿಯತೆಗಾಗಿ ಸೋಷಿಯಲ್ ಮಿಡಿಯಾಗಳನ್ನ ಯುವ ಜನತೆ ನಾನಾ ರೀತಿಗಳಲ್ಲಿ ಯೂಸ್ ಮಾಡೋದನ್ನ ನಾವು ಗಮನಿಸಿದ್ದೇವೆ, ಆದ್ರೆ ಇಂಡೋನೇಷಿಯಾದ ಖೋರಿಲ್ ಅಮನ್ ಎಂಬಾತ ಒಂದು ಹೆಜ್ಜೆ ಮುಂದು ಹೋಗಿ ರೈಸ್ ಕುಕ್ಕರ್ ಅನ್ನು ಮ್ಯಾರೇಜ್ ಆಗುವ ಮೂಲಕ ವಿಚಿತ್ರ ಪ್ರಯತ್ನಕ್ಕೆ ಕೈ ಹಾಕಿದ್ದಾನೆ. ರೈಸ್ ಕುಕ್ಕರ್ ಗೆ ಶೃಂಗಾರ ಮಾಡಿ ತಾನು ಕೂಡಾ ಮದುಮಗನಂತೆ ಅಲಂಕರಿಸಿಕೊಂಡಿದ್ದಾನೆ. ಕುಕ್ಕರ್ ಬಣ್ಣ ಬಿಳಿ ಮತ್ತು ಅದಕ್ಕೆ ಮಾತು ಬಾರದ ಕಾರಣ ತನ್ನ ಹೆಂಡತಿಯಾಗಿ ಸ್ವೀಕರಿಸಲು ಮುಂದಾಗಿದ್ದನಂತೆ ಖೋರಿಲ್.
ಖೋರಿಲ್ ಸಂಸಾರ ಶುರು ಮಾಡೋ ಬದಲು ಮಾಡಿದ್ದೆ ಬೇರೆ… ಎನಪ್ಪಾ ಅಂದ್ರೆ ಈತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಹೆಂಡತಿಗೆ ನಾಲ್ಕೆ ದಿನಕ್ಕೆ ಡೈವೋರ್ಸ್ ಕೂಡಾ ಕೊಟ್ಟಿದ್ದಾನೆ. ಇದಕ್ಕೆ ಈತನ ಉತ್ತರ ನನ್ನ ಹೆಂಡತಿಗೆ ಮಾತನಾಡುವುದಿಲ್ಲ ಅನ್ನೋದು. ಈತನ ಈ ಪ್ರಚಾರದ ಗೀಳಿಗೆ ಜನ ನೆಟ್ಟಿಗರು ಗರಂ ಫುಲ್ ಗರಂ ಆಗಿದ್ದಾರೆ.