Sunday, December 22, 2024

Latest Posts

‘ಮಾರ್ಟಿನ್’ ರಿಲೀಸ್ ಡೇಟ್ ಫಿಕ್ಸ್.!

- Advertisement -

ನಟ ಧ್ರುವ ಸರ್ಜಾ ಅವರ 2012 ರಲ್ಲಿ ತೆರೆಕಂಡ ‘ಅದ್ಧೂರಿ’ ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದರು. ಬಳಿಕ 2013 ರಲ್ಲಿ ‘ಬಹುದ್ಧೂರ್’ ಚಿತ್ರದಲ್ಲಿ ರಾಧಿಕಾ ಪಂಡಿತ್ ಅವರ ಜೊತೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ಬಾರಿ ಯಶಸ್ಸು ಕಂಡರು. ಇನ್ನು 2017ರಲ್ಲಿ ತೆರೆಗೆ ಬಂದ ‘ಭರ್ಜರಿ’ ಚಿತ್ರ ಕೂಡ ಶತದಿನ ಪೂರೈಸಿತ್ತು. ಧ್ರುವ ಸರ್ಜಾ ನಟಿಸಿರುವ ಮೊದಲ ಮೂರು ಚಿತ್ರಗಳು ಕೂಡ ಮೆಗಾಹಿಟ್ ಆಗಿದ್ದು, ಅವರ ನಾಲ್ಕನೇ ಸಿನಿಮಾ ಹೇಗಿರಬಹುದು ಎನ್ನುವ ಕುತೂಹಲ ಸಿನಿ ಅಭಿಮಾನಿಗಳಿಗಿದೆ.

ಸ್ಯಾಂಡಲ್‌ವುಡ್‌ನ ಆಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ಇದೀಗ ಮತ್ತೆ ಗಾಂಧಿನಗರದಲ್ಲಿ ಸೌಂಡ್ ಮಾಡಲು ಬರುತ್ತಿದ್ದಾರೆ. ಈ ಹಿಂದೆ ‘ಪೊಗರು’ ಸಿನಿಮಾದಲ್ಲಿ ನಟಿಸಿ ಸಿನಿ ಪ್ರೇಕ್ಷಕರನ್ನು ಧ್ರುವ ರಂಜಿಸಿದ್ದರು. ಈಗ ‘ಮಾರ್ಟಿನ್’ ಎಂಬ ಹೊಸ ಅವತಾರದಲ್ಲಿ ಮತ್ತೆ ತೆರೆಮೇಲೆ ಬರಲು ಸಜ್ಜಾಗಿದ್ದಾರೆ.

‘ಬಹದ್ದೂರ್ ಹುಡುಗ’ ಧ್ರುವ ಸರ್ಜಾ ಮತ್ತೆ ಭರ್ಜರಿಯಾಗಿ ಥಿಯೇಟರ್‌ಗೆ ಎಂಟ್ರಿ ಕೊಡಲಿದ್ದಾರೆ. ಇದೀಗ ಧ್ರುವ ಸರ್ಜಾ ‘ಪೊಗರು’ ಚಿತ್ರದ ನಂತರ ಮಾರ್ಟಿನ್‌ ಅವತಾರಹೊತ್ತು ಕ್ರೈಂ ಲೋಕದ ಕಥೆ ಹೇಳಲು ಸಿದ್ದರಾಗಿದ್ದಾರೆ. ಇನ್ನು ‘ಮಾರ್ಟಿನ್‌’ ಚಿತ್ರದ ಬಿಡುಗಡೆ ಡೇಟ್ ಫಿಕ್ಸ್ ಆಗಿದ್ದು, ಪ್ರೇಕ್ಷಕರು ತಮ್ಮ ನೆಚ್ಚಿನ ನಟನ ಸಿನಿಮಾ ನೋಡಲು ಕಾತುರದಿಂದ ಕಾದು ಕುಳಿತಿದ್ದಾರೆ.

ಧ್ರುವ ಸರ್ಜಾ ಅಭಿನಯದ 5ನೇ ಸಿನಿಮಾ ‘ಮಾರ್ಟಿನ್’ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದ್ದು, ಸಿನಿ ಪ್ರೇಕ್ಷಕರ ಸಂತೋಷ ಮುಗಿಲು ಮುಟ್ಟಿದೆ. ಇದೆ ಸೆಪ್ಟೆಂಬರ್‌ 30 ರಂದು ಈ ಸಿನಿಮಾವನ್ನು ತೆರೆ ಮೇಲೆ ತರಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದ್ದಾರೆ.

‘ಮಾರ್ಟಿನ್‌’ ಸಿನಿಮಾ ಧ್ರುವ ಸರ್ಜಾ ಹಾಗೂ ನಿರ್ದೇಶಕ ಎಪಿ ಅರ್ಜುನ್ ಕಾಂಬಿನೇಶನ್‌ ನಲ್ಲಿ ಮೂಡಿ ಬಂದಿದೆ. ಸೆಪ್ಟೆಂಬರ್‌ 30 ಕ್ಕೆ ಈ ಸಿನಿಮಾವನ್ನು ಬೆಳ್ಳಿತೆರೆ ಮೇಲೆ ತರ್ತಿದ್ದೇವೆ ಅಂತ ನಿರ್ಮಾಪಕ ಉದಯ್ ಕೆ ಮೆಹ್ತಾ ಘೋಷಣೆ ಮಾಡಿದ್ದಾರೆ.

ಇಷ್ಟು ದಿನ ನಟ ಧ್ರುವ, ಅವರ ಮಾಸ್ ಡೈಲಾಗ್ ನಿಂದ ಅಭಿಮಾನಿಗಳ ಮನ ಗೆದ್ದಿದ್ದರು ಆದರೆ ಈ ಸಿನಿಮಾದಲ್ಲಿ ಡೈಲಾಗ್ ಕಮ್ಮಿಯಿದ್ದು, ಫೈಟಿಂಗ್ ಮತ್ತು ಮಾಸ್ ಎಲಿಮೆಂಟ್‌ಗಳು ಜಾಸ್ತಿ ಇದೆಯಂತೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

 

 

- Advertisement -

Latest Posts

Don't Miss