ಮಂಡ್ಯದಲ್ಲಿ ಮಾಸ್ಕ್ ಡೇ ಆಚರಣೆ

ಮಂಡ್ಯ: ಜೂನ್ 18ರಂದು ರಾಜ್ಯ ಸರ್ಕಾರದಿಂದ ಮಾಸ್ಕ್ ಡೇ ಆಚರಣೆ ಹಿನ್ನೆಲೆ, ಮಂಡ್ಯ ಜಿಲ್ಲಾಡಳಿತ ಮಾಸ್ಕ್ ಡೇ ಆಚರಣೆ ಮಾಡಿತು.

ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಾಸ್ಕ್ ಡೇ ಆಚರಣೆ ಆಯೋಜಿಸಲಾಗಿದ್ದು, ಮಂಡ್ಯದ ಜಿಲ್ಲಾಧಿಕಾರಿ ಕಛೇರಿ ಎದುರು ಸಂಸದೆ ಸುಮಲತಾ ಅಂಬರೀಷ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಲ್ಲಾರೂ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸುವಂತೆ ಜಾಗೃತಿ ಮೂಡಿಸಲಾಯಿತು.

https://youtu.be/7GStfT4rX2k

ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಬಳಸಿ, ಆಗಾಗಾ ಸ್ಯಾನಿಟೈಸರ್‌ನಿಂದ ಕೈ ತೊಳೆಯುವಂತೆ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಡಿಸಿ ವೆಂಕಟೇಶ್, ಸಿಇಓ ಯಾಲಕ್ಕಿಗೌಡ, ಡಿಎಚ್ಒ ಮಂಚೇಗೌಡ, ಹೆಚ್ಚುವರಿ ಪೋಲಿಸ್ ವರಿಷ್ಟಾಧಿಕಾರಿ ಶೋಭಾರಾಣಿ ಇತರರು ಭಾಗಿಯಾಗಿದ್ದರು.

About The Author