ಧರ್ಮಸ್ಥಳ ಕೇಸ್‌ನಲ್ಲಿ ಲಾಕ್ ಆಗಿರುವ, ಮಾಸ್ಕ್‌ಮ್ಯಾನ್ ಚಿನ್ನಯ್ಯನಿಗೆ ಪಶ್ಚಾತಾಪ ಆಗಿದೆಯಂತೆ. ಎಸ್‌ಐಟಿ ಅಧಿಕಾರಿಗಳ ವಿಚಾರಣೆ ವೇಳೆ, ಏನೇ ಪ್ರಶ್ನೆ ಕೇಳಿದ್ರೂ ಕಣ್ಣೀರು ಹಾಕುತ್ತಿದ್ದಾನಂತೆ. ಸೆಪ್ಟೆಂಬರ್ 3ರಂದು ಬುಧವಾರ, ಚಿನ್ನಯ್ಯನ ಪೊಲೀಸ್ ಕಸ್ಟಡಿ ಮುಗಿದಿತ್ತು. ಹೀಗಾಗಿ, ಆತನನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಆಗ ಕೋರ್ಟ್‌ನಲ್ಲಿಯೂ ಆತ ಕಣ್ಣೀರು ಹಾಕಿದ್ದಾನಂತೆ. ಕೋರ್ಟ್‌ನಿಂದ ಹೊರಗೆ ಬರುತ್ತಿದ್ದಂತೆ ಅಲ್ಲಿಯೂ ಕಣ್ಣೀರು ಸುರಿಸಿದ್ದಾನೆ.
ಮತ್ತೆ 3 ದಿನಗಳ ಕಾಲ ಪೊಲೀಸ್ ಕಸ್ಟಡಿ ಹಿನ್ನೆಲೆ, ಸೆಪ್ಟೆಂಬರ್ 4ರ ಗುರುವಾರ ಚಿನ್ನಯ್ಯನನ್ನ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿತ್ತು. ಆ ವೇಳೆಯೂ ಅಧಿಕಾರಿಗಳ ಎದುರು ಗೋಳಾಡಿದ್ದಾನೆ. ಇಷ್ಟೆಲ್ಲಾ ಆಗುತ್ತೆ ಅಂತ ನನಗೆ ಗೊತ್ತಿರಲಿಲ್ಲ. ಸರ್ ನನ್ನನ್ನು ಬಿಟ್ಟು ಬಿಡಿ ಎಂದು ಗೋಗರೆಯುತ್ತಿದ್ದಾನಂತೆ. ಮಾಡಿದ ತಪ್ಪಿಗೆ ಪಶ್ಚಾತ್ತಾಪವಾಗಿದೆ. ಸೂತ್ರದಾರರು ಹೇಳಿದಂತೆ ತಪ್ಪು ಮಾಡಿದ್ದೇನೆ. ಇನ್ನು, ನನಗೆ ಯಾರಿದ್ದಾರೆ. ನನ್ನೊಂದಿಗಿದ್ದ ವಕೀಲರ ಮೇಲೆ, ನನಗೀಗ ಭರವಸೆ ಉಳಿದಿಲ್ಲ ಅಂತಾ ಹೇಳಿಕೊಂಡಿದ್ದಾನೆ.
ಇನ್ನು, ಚಿನ್ನಯ್ಯನ ಎಸ್‌ಐಟಿ ಕಸ್ಟಡಿ ನಾಳೆ ಅಂತ್ಯವಾಗಲಿದೆ. ಹೀಗಾಗಿ ಸೆಪ್ಟೆಂಬರ್ 5ರಂದು ಇಡೀ ದಿನ ಚಿನ್ನಯ್ಯನ ವಿಚಾರಣೆ ನಡೆಯಿದೆ. ಇಂದೇ ಅಂತಿಮ ಹಂತದ ತನಿಖೆ ಮುಗಿಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಮತ್ತೊಂದೆಡೆ, ಎಐ ವಿಡಿಯೋ ಬಳಸಿ ಧರ್ಮಸ್ಥಳ ವಿರುದ್ಧ ಅಪಪ್ರಚಾರ ಆರೋಪ ಹೊತ್ತಿರುವ ಯೂಟ್ಯೂಬರ್ ಸಮೀರ್ ಮನೆಯಲ್ಲಿ, ಮಹಜರು ಮಾಡಲಾಗಿದೆ. ಬೆಂಗಳೂರಿನ ಬನ್ನೇರುಘಟ್ಟ ಬಳಿಯ ಹುಲ್ಲಹಳ್ಳಿಯ ನಿವಾಸದಲ್ಲಿ, ಅಧಿಕಾರಿಗಳು ತಲಾಶ್ ನಡೆಸಿದ್ರು. ವಿಡಿಯೋ ಎಡಿಟಿಂಗ್‌ಗೆ ಬಳಸಿದ್ದ ಕಂಪ್ಯೂಟರ್, ಹಾರ್ಡ್ ಡಿಸ್ಕ್, ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆಗೆ ಕರೆದಾಗ ಬರುವಂತೆ ಸೂಚನೆ ನೀಡಲಾಗಿದೆ.




