ವಿವಿಧ ಬೇಡಿಕೆ ಈಡೇರಿಸುವಂತೆ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ!

ಜಿಲ್ಲಾ ಸಿವಿಲ್ ಗುತ್ತಿಗೆದಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುತ್ತಿಗೆದಾರ ಸಂಘಟನೆಯಿಂದ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ಕೊಪ್ಪಳದ ಅಶೋಕ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೆರವಣಿಗೆ ನಡೀತು.

ಗುತ್ತಿಗೆದಾರರ ವಿವಿಧ ಬೇಡಿಕೆಗಳಾದ ಕ್ರಷರ್ ಸಮಸ್ಯೆ, ಪ್ಯಾಕೆಜ್ ಪದ್ಧತಿ ವಿರೋಧ, ಲ್ಯಾಂಡ್ ಆರ್ಮಿ ಮತ್ತು ನಿರ್ಮತಿ ಕೇಂದ್ರಕ್ಕೆ ನೀಡುತ್ತಿರುವ ಕಾಮಗಾರಿಗಳನ್ನು ವಿರೋಧಿಸಿ ಮತ್ತು ಬಿಲ್ ಪಾವತಿ ಮಾಡದಿರುವ ಬಗ್ಗೆ ಪ್ರತಿಭಟನೆ ಮಾಡಿದ್ದಾರೆ.

ಕೊಪ್ಪಳ ಪ್ರೇರಣ ಸಂಸ್ಥೆಯನ್ನು ಮಧ್ಯ ತರದಂತೆ ಗುತ್ತಿಗೆದಾರರಿಗೆ ಕ್ರಷರ್ ಮುಖಾಂತರ ನೇರವಾಗಿ ಜಲ್ಲಿಗಳು ದೊರಕುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಪ್ಯಾಕೇಜ್ ಪದ್ದತಿಯಿಂದ ಕೆಲಸ ಸಿಗುತ್ತಿಲ್ಲವೆಂದು ಗುತ್ತಿಗೆದಾರರು ಬೀದಿಗಿಳಿದಿದ್ದಾರೆ. ಲ್ಯಾಂಡ್ ಆರ್ಮಿ ಮತ್ತು ನಿರ್ಮಿತಿ ಕೇಂದ್ರಕ್ಕೆ ನೀಡುವ ಕಾಮಗಾರಿಗಳನ್ನು ನಿಲ್ಲಿಸಬೇಕು. ಗುತ್ತಿಗೆದಾರರನ್ನು ಬೀದಿಗೆ ತಂದ ಪ್ರೇರಣಾ ಸಂಸ್ಥೆ ಮುಚ್ಚುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕೊಪ್ಪಳ ಜನಪ್ರತಿನಿದಿನಗಳ ಒಡೆತನದಲ್ಲಿ ಇರುವ ಪ್ರೇರಣಾ ಸಂಸ್ಥೆ ಮೂಲಕ ಗುತ್ತಿಗೆದಾರ ಕಾಮಗಾರಿಗಳಿಗೆ ಬೇಕಾಗಿರುವ ಸಾಮಗ್ರಿಗಳನ್ನು ಖರೀದಿಸಲು ಹೇರಲಾಗಿರುವ ನಿಯಮವನ್ನು ಆರೋಪಿಸಿದ್ದಾರೆ. ಈ ಬೃಹತ್ ಪ್ರತಿಭಟನೆಯಲ್ಲಿ ಕೊಪ್ಪಳ ಗುತ್ತೇದಾರರ ಸಂಘ, ಕೊಪ್ಪಳ ಟಿಪ್ಪರ್ ವಾಹನಗಳ ಸಂಘ ಹಾಗು ಅನೇಕರು ಭಾಗಿಯಾಗಿದ್ದರು.

ವರದಿ : ಲಾವಣ್ಯ ಅನಿಗೋಳ

About The Author