ಮಂಡ್ಯ: ಜಿಲ್ಲೆಯಾದ್ಯಂತ ಸಿಪಿಐ(ಎಂ) ವತಿಯಿಂದ ಜನಪರ ಹೋರಾಟದ ಘೋಷಣೆ. ನವೆಂಬರ್ 15ರಿಂದ ಡಿಸೆಂಬರ್ 15ರವರೆಗೆ ಜನಾಂದೋಲನ ನಡೆಯಲಿದ್ದು, ರಾಜ್ಯ ಸರ್ಕಾರದ ವಿರುದ್ಧ 21 ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿಗೆ ಕಾವೇರಿ ನೀರಿನ 5ನೇ ಹಂತದ ಯೋಜನೆಗೆ ವಿರೋಧ, ಕಬ್ಬಿನ ಟನ್‌ಗೆ 5500 ಬೆಲೆ, ಉದ್ಯೋಗ ಖಾತರಿಯಡಿ 200 ದಿನಗಳ ಕೆಲಸ ಮತ್ತು ದಿನಕ್ಕೆ 600 ಕನಿಷ್ಠ ಕೂಲಿ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಮುಂದಿರಿಸಲಾಗಿದೆ ಎಂದು ಪಕ್ಷದ ಕಾರ್ಯದರ್ಶಿ ಟಿ.ಎಲ್. ಕೃಷ್ಣೇಗೌಡ ಅವರು ತಿಳಿಸಿದ್ದಾರೆ
ಜನಾಂದೋಲನದ ಅಂಗವಾಗಿ ಮನೆಮನೆಗೆ ತೆರಳಿ, ಸಿಪಿಐ(ಎಂ)ನ ಜನಪರ ನೀತಿಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ಕ್ರಮಗಳ ವಿರುದ್ಧ ಜಾಗೃತಿ ಮೂಡಿಸಲಾಗುವುದು. ಡಿಸೆಂಬರ್ 21ರಂದು ಬೃಹತ್ ಪ್ರತಿಭಟನಾ ಸಭೆ ನಡೆಯಲಿದ್ದು, ಸುಮಾರು 5 ಸಾವಿರ ಮಂದಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಗಟ್ಟಿಯಾದ ಎಚ್ಚರಿಕೆಯ ಘೋಷಣೆ ನೀಡಲಾಗುವುದು ಎಂದು ಸಿಪಿಐ(ಎಂ) ನಾಯಕರು ತಿಳಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




