Wednesday, July 2, 2025

Latest Posts

ನವಿಲುತೀರ್ಥ ಡ್ಯಾಂನಿಂದ ಅಪಾರ ಪ್ರಮಾಣದ ನೀರು ಬಿಡುಗಡೆ: ಜನರಿಗೆ ಪ್ರವಾಹದ ಭೀತಿ

- Advertisement -

Gadag News: ಗದಗ: ಗದಗ ನವಿಲು ತೀರ್ಥ ಡ್ಯಾಂನಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಹಿನ್ನೆಲೆ, ಗದಗ ಜಿಲ್ಲೆಯ ಮಲಪ್ರಭಾ ನದಿ ತೀರದ ಹಲವು ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ವಾಸನ ಗ್ರಾಮದ ಕೂಗಳತೆ ದೂರದವರೆಗೂ ಜಮೀನುಗಳು ಜಲಾವೃತಗೊಂಡಿದೆ. ಕಬ್ಬು, ಗೋವಿನ ಜೋಳ, ಹೆಸರು ಸೇರಿದಂತೆ ಹಲವು ಬೆಳೆಗಳು ಜಲಾವೃತವಾಾಗಿದೆ. ಇನ್ನು ಹೆಚ್ಚಿನ ಪ್ರಮಾಣದ ನೀರು ಬಿಡುಗಡೆಯಾದ್ರೆ ವಾಸನ ಗ್ರಾಮವೇ ಜಲಾವೃತವಾಗುವ ಭೀತಿ ಇದೆ.

ಈಗಾಗಲೇ ಲಖಮಾಪೂರ, ಕೊಣ್ಣೂರ ಸೇರಿದಂತೆ ಹಲವು ಗ್ರಾಮದ ವ್ಯಾಪ್ತಿಯ ಬೆಳೆಗಳು ಮಳೆಗೆ ಹಾನಿಯಾಗಿದೆ. ಈ ಧಾರಾಕಾರ ಮಳೆಗೆ ಮಲಪ್ರಭಾ ನದಿ ಪಾತ್ರದ ಹಲವು ಗ್ರಾಮಗಳು ಪದೇ ಪದೇ ಪ್ರವಾಹದ ಭೀತಿ ಎದುರಿಸುತ್ತಿದೆ.

- Advertisement -

Latest Posts

Don't Miss