Sunday, April 20, 2025

Latest Posts

Master Anand-ವಂಶಿಕಾ ಹೆಸರು ಹೇಳಿ ಜನರಿಂದ ಹಣ ವಸೂಲಿ ಮಾಡಿದ ನಿಶಾ ನರಸಪ್ಪ

- Advertisement -

ಸಿನಿಮಾ ಸುದ್ದಿ: ಹಲವಾರು ಶೋಗಳ ಮೂಲಕ ತನ್ನ ಪ್ರತಿಭೆಯ ಮೂಲಕ ರಾಜ್ಯಾದ್ಯಂತ ಜನಪ್ರೀಯತೆಯನ್ನು ಗಳಿಸಿಕೊಂಡಿರುವ ಬಾಲನಟಿ ಎಂದರೆ ಮಾಸ್ಟರ್ ಆನಂದ ಅವರ ಮಗಳು ವಂಶಿಕಾ .ಈಗ ಆ ಮಗುವಿನ ಹೆಸರು ಬಳೆಸಿಕೊಂಡು ಮಹಿಳೆಯೊಬ್ಬಳು ಜನರಿಗೆ ಬರೋಬ್ಬರಿ 40 ಲಕ್ಷ  ಪಡೆದುಕೊಂಡು ಮೋಸ ಮಾಡಿದ್ದಾಳೆ

ಮಕ್ಕಳ ಮಾಡೆಲಿಂಗ್,  ಮಕ್ಕಳ ಗ್ರೂಮಿಂಗ್  ಮಕ್ಕಳ ಟ್ಯಾಲೆಂಟ್ ಶೋ ಇವೆಂಟ್ ಮ್ಯಾನೇಜ್​ಮೆಂಟ್, ತರಗತಿಗಳನ್ನು ನಡೆಸುತ್ತೇನೆ ಎಂದು ಹೇಳಿ ಮಕ್ಕಳ ಪೋಷಕರಿಂದ ಲಕ್ಷಾಂತರ ಹಣವನ್ನು ನಿಶಾ ವಸೂಲಿ ಮಾಡಿದ್ದಾರೆ ಎನ್ನಲಾಗುತ್ತಿದೆ. ನಿಶಾರಿಂದ ಹಣ ಕಳೆದುಕೊಂಡು ಮೋಸ ಹೋದ ಕೆಲವರು ನಿಶಾರ ವಿರುದ್ಧ   ಠಾಣೆಯಲ್ಲಿ ದೂರು ನೀಡಿ   ಫೇಸ್​ಬುಕ್​ನಲ್ಲಿಯೂ ಘಟನೆ  ಬರೆದುಕೊಂಡಿದ್ದಾರೆ. ಜನರಿಗೆ ಮಾಹಿತಿ ತಿಳಿಸಿದ್ದಾರೆ

ಇತ್ತೀಚೆಗೆ ಮಾಸ್ಟರ್ ಆನಂದ್​ರ ಪುತ್ರಿ ವಂಶಿಕಾ ಹೆಸರು ಹೇಳಿಕೊಂಡು ಹಲವರಿಗೆ ಮೋಸ ಮಾಡಿದ್ದಾರಂತೆ ನಿಶಾ ನರಸಪ್ಪ. ವಂಶಿಕಾ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸುಮಾರು 40 ಲಕ್ಷ ರೂಪಾಯಿ ಹಣವನ್ನು ನಿಶಾ ವಸೂಲಿ ಮಾಡಿದ್ದರಂತೆ. ಈ ಬಗ್ಗೆ ಹಣ ಕಳೆದುಕೊಂಡವರು ಹಾಗೂ ವಂಶಿಕಾರ ತಾಯಿ ಯಶಸ್ವಿನಿ ಆನಂದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜನ  ಹಣವನ್ನು ಗಳಿಸಲು ಬಾಲ ಪ್ರತಿಭೆಯ ಹೆಸರು ಹೇಳಿಕೊಂಡು ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುವುದರಲ್ಲಿ ಎಷ್ಟು ಒಳ್ಳೆಯದು ಹೇಳಿ .

BBMP- ಒಣ ತ್ಯಾಜ್ಯ ಸಂಗ್ರಹಣಾ ಘಟಕ ಪರಿಶೀಲನೆ

Railway-ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ನೈರುತ್ಯ ರೈಲ್ವೆ ಜಯಶಾಲಿ

Shourya : ಆಪತ್ತು ತಪ್ಪಿಸಿದ ಸಾಣೂರು ವಿಪತ್ತು ನಿರ್ವಹಣಾ ತಂಡ…!

- Advertisement -

Latest Posts

Don't Miss