ಆಸ್ಟ್ರೇಲಿಯಾ ಆಟಗಾರ ಗ್ಲೇನ್ ಮ್ಯಾಕ್ಸ್‌ವೆಲ್ ಮತ್ತು ವಿನಿ ರಾಮನ್ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. 2020ರಲ್ಲಿ ವಿನಿ ಮತ್ತು ಮ್ಯಾಕ್ಸ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೇ ಮಾರ್ಚ್ 18ರಂದು ಮ್ಯಾಕ್ಸ್ ಮತ್ತು ವಿನಿ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದರು. ನಂತರ ಭಾರತಕ್ಕೆ ಬಂದ ಜೋಡಿ, ಚೆನ್ನೈನ ವಿನಿ ಮನೆಯಲ್ಲಿ ಹಿಂದೂ ಸಂಪ್ರದಾಯದಂತೆ ಹಸೆ ಮಣೆ ತುಳಿದಿದ್ದಾರೆ.
ಮ್ಯಾಕ್ಸ್ ಡಾನ್ಸ್ ಮಾಡುತ್ತಾ ವಿನಿಗೆ ಹಾರ ಹಾಕಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಮ್ಯಾಕ್ಸ್ ಶೇರ್ವಾನಿ ಹಾಕಿ ಕೊಂಡಿದ್ದು, ವಿನಿ ಕೆಂಪು ರೇಷ್ಮೆ ಸೀರೆಯಲ್ಲಿ ಮಿಂಚಿದ್ದಾರೆ. ಮದುವೆಗೂ ಮೊದಲು ಮೆಹಂದಿ, ಸಂಗೀತ್ ಕಾರ್ಯಕ್‌ರಮಗಳೂ ನಡೆದಿದೆ. ಈ ಬಗ್ಗೆ ಮ್ಯಾಕ್ಸ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬರೆದಿರುವ ಗ್ಲೇನ್, ಮದುವೆಯು ಎರಡು ಆತ್ಮಗಳು ಮತ್ತು ಅವರ ಕುಟುಂಬಗಳ ಒಕ್ಕೂಟವಾಗಿದೆ. ನಮ್ಮನ್ನು ಬೆಂಬಲಿಸಿದ ನಮ್ಮ ಪೋಷಕರ ಬಗ್ಗೆ ನಮಗೆ ತುಂಬಾ ಪ್ರೀತಿ ಮತ್ತು ಮೆಚ್ಚುಗೆ ಇದೆ. ನೀವು ಇಲ್ಲದೆ ನಾವು ಇಲ್ಲಿ ಇರುವುದಿಲ್ಲ ಎಂದಿದ್ದಾರೆ.
ಇನ್ನು ಮ್ಯಾಕ್ಸ್ ಮತ್ತು ವಿನಿ ಮಧ್ಯೆ ಪ್ರೇಮಾಂಕುರವಾಗಿದ್ದು ಹೇಗೆ ಅಂತಾ ಹೇಳೋದಾದ್ರೆ, ವಿನಿ ಭಾರತೀಯ ಮೂಲದ ಆಸ್ಟ್ರೇಲಿಯಾ ಪ್ರಜೆ. ವಿನಿ ಹುಟ್ಟುವ ಮುನ್ನವೇ, ಅವರ ತಂದೆ ತಾಯಿ ಆಸ್ಟ್ರೇಲಿಯಾಕ್ಕೆ ಹೋಗಿದ್ದರು. ವಿನಿ ಹುಟ್ಟಿದ್ದು ಆಸ್ಟ್ರೇಲಿಯಾದಲ್ಲೇ. ಅಲ್ಲೇ ಇದ್ದ ಕಾರಣ, ಮ್ಯಾಕ್ಸ್ ಪರಿಚಯವಾಗಿ, ಗೆಳೆತನ ಪ್ರೇಮಕ್ಕೆ ತಿರುಗಿ, ಇಬ್ಬರೂ ನವಜೀವನಕ್ಕೆ ಕಾಲಿರಿಸಿದ್ದಾರೆ.




