Thursday, July 24, 2025

Latest Posts

ಬಿಜೆಪಿಯಲ್ಲಿ ಮೇಯರ್ ಗೌನ್ ತೊಡಿಸಲು ನಾಯಕರ ಕಸರತ್ತು…!

- Advertisement -

www.karnatakatv.net : ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕಾಗಿ ಬಿಜೆಪಿ ನಾಯಕರ ನಡುವೆ ಮುಸುಕಿನ ಗುದ್ದಾಟ ನಡೆದಿದೆ.

ಬಿಜೆಪಿಯಲ್ಲಿ ಮೇಯರ್ ಗೌನ್ ಗಾಗಿ ಹಿರಿಯ ನಾಯಕರ ನಡುವೆ ಬಿಗ್ ಫೈಟ್ ಏರ್ಪಟ್ಟಿದ್ದು, 2ಎ ಗೆ ಮೀಸಲಾಗಿರುವ ಮೇಯರ್ ಸ್ಥಾನ ಹಾಗೂ ಎಸ್ಸಿ ಮಹಿಳೆಗೆ ಮೀಸಲಾಗಿರುವ ಉಪಮೇಯರ್ ಸ್ಥಾನಕ್ಕೆ ಬಿಜೆಪಿಯಲ್ಲಿ ದಿನಕ್ಕೊಂದು ಬದಲಾವಣೆಗಳು ಆಗುತ್ತಿವೆ.

ಮೇಯರ್ ಗದ್ದುಗೆಗೆ ಭಾರಿ ಕಸರತ್ತು ನಡೆದಿದ್ದು, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್, ಬೆಲ್ಲದ್  ನಡುವೆ ಪೈಪೋಟಿ ಏರ್ಪಟ್ಟಿದೆ. ಇನ್ನೂ ಟಿಕೆಟ್ ಹಂಚಿಕೆ ವಿಚಾರದಲ್ಲೂ ಮೂವರು ನಾಯಕರ ನಡುವೆ ಮನಸ್ತಾಪವಿತ್ತು. ಮೇಯರ್ ಆಯ್ಕೆಯಲ್ಲಿಯೂ ಮನಸ್ತಾಪ ಮುಂದುವರಿದಿದೆ. ನಾಯಕರ ಸಮನ್ವಯದ ಕೊರತೆಯಿಂದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮುಗ್ಗರಿಸಿದೆ.

ತಮ್ಮ ಬೆಂಬಲಿಗರನ್ನು ಮೇಯರ್ ಮಾಡಲು ನಾಯಕರು ಜಿದ್ದಿಗೆ ಬಿದ್ದಿದ್ದಾರೆ. ಜೋಶಿ ಬೆಂಗಲಿಗ ವಿರೇಶ್ ಅಂಚಟಗೇರಿ, ಶೆಟ್ಟರ್ ಬೆಂಬಲಿಗ ತಿಪ್ಪಣ್ಣ ಮಜ್ಜಗಿ, ಬೆಲ್ಲದ್ ಬೆಂಬಲಿಗ ರಾಮಣ್ಣ ಬಡಿಗೇರ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮೇಯರ್ ಸ್ಥಾನ ಧಾರವಾಡಕ್ಕೆ ಬಿಟ್ಟು ಕೊಟ್ಟರೆ ವಿರೇಶ್ ಗೆ ಬಂಪರ್ ಹೊಡೆದಂತಾಗುತ್ತದೆ. ಹುಬ್ಬಳ್ಳಿಗೆ ಆದರೆ ತಿಪ್ಪಣ್ಣ ಸಾಧ್ಯತೆ ಎಂಬುವಂತ ಮಾತುಗಳು ಕೇಳಿ ಬರುತ್ತಿವೆ. ದಿನಾಂಕ ಘೋಷಣೆಗೂ ಮುನ್ನ ಶುರುವಾಯಿತು ಭಾರಿ ಕಸರತ್ತು ನಡೆಸಿದ್ದು, ಮೇಯರ್ ಆಯ್ಕೆ ಬಿಜೆಪಿಯಲ್ಲಿ ಕಗ್ಗಂಟಾಗಿದೆ. ಸಚಿವ ಸ್ಥಾನವು ಸಿಗದೆ ಮುನಿಸಿಕೊಂಡಿರುವ ಬೆಲ್ಲದ್ ತಮ್ಮ ಬೆಂಬಲಿಗರಿಗೆ ಮೇಯರ್ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದಾರೆ.

ಇನ್ನೂ ಅರವಿಂದ ಬೆಲ್ಲದ ಪಟ್ಟು ಸಡಿಲಿಸಲು  ಜಗದೀಶ್ ಶೆಟ್ಟರ್ ಮುಂದಾಗಿದ್ದು, ಇಬ್ಬರು ನಾಯಕರ ಜಿದ್ದಿನ‌ ನಡುವೆ ಜೋಶಿ ಬೆಂಬಲಿಗ ವಿರೇಶ ಅಂಚಟಗೇರಿಗೆ ಬಂಪರ್ ಹೊಡೆಯುವ ಸಾದ್ಯತೆ ದಟ್ಟವಾಗಿದೆ.

ಕರ್ನಾಟಕ  ಟಿವಿ- ಹುಬ್ಬಳ್ಳಿ.

- Advertisement -

Latest Posts

Don't Miss